ಶಿಡ್ಲಘಟ್ಟ
ಸಾಮಾನ್ಯರಲ್ಲಿ ಸಾಮಾನ್ಯವಾಗಿ ನಿಮ್ಮ ಮನೆ ಮಗನಾಗಿ ನಡೆಯುತ್ತೇನೆ ಕಾಂಗ್ರೆಸ್ ಮುಖಂಡ ಎಚ್ ಎ ಎಲ್ ದೇವರಾಜ್.,..
ಬಲವಂತನ ಪ್ರತಿಕ್ಷಣದಲ್ಲಿಯೂ ಪ್ರತಿ ಜೀವಿಯಲ್ಲೂ ಪ್ರತಿ ವಸ್ತುವಿನಲ್ಲೂ ಎಲ್ಲಾ ಮನುಷ್ಯರಲ್ಲೂ ಪ್ರತಿಯೊಂದರಲ್ಲೂಇರುತ್ತಾರೆ ಬಡವ-ಶ್ರೀಮಂತ ದಲಿತರ ಮಧ್ಯೆ ಪ್ರತಿಯೊಬ್ಬರಿಗೂ ಗೌರವ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಎಚ್ಎಎಲ್ ದೇವರಾಜ್ ತಿಳಿಸಿದರು.
ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಬೆಟ್ಟ ಗ್ರಾಮ ಪಂಚಾಯತಿಯ ಬಂಡಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಆಯೋಜಿಸಿದ್ದ ಭಕ್ತ ಪ್ರಹ್ಲಾದ ನಾಟಕದಲ್ಲಿ ಭಾಗಿಯಾಗಿ ಮಾತನಾಡಿದ ಕಾಂಗ್ರೆಸ್ ಮುಖಂಡ ಎಚ್ಎಎಲ್ ದೇವರಾಜ್ ಅವರು ಇತ್ತೀಚಿನ ದಿನಗಳಲ್ಲಿ ನಾಟಕರಂಗ ನಶಿಸಿಹೋಗುತ್ತಿದೆ ಅಂತಹದರಲ್ಲಿ ಬಂಡಹಳ್ಳಿ ಗ್ರಾಮಸ್ಥರು ಭಕ್ತ ಪ್ರಹ್ಲಾದ ಘಟಕವನ್ನು ಏರ್ಪಡಿಸಿ ನಾಟಕರಂಗ ಉಳಿದಿದೆ ಎಂದು ತೋರಿಸಿದ್ದಾರೆ ಈ ನಾಟಕದ ಉದ್ದೇಶ ಪ್ರತಿ ಜೀವಿಯಲ್ಲೂ ಎಲ್ಲಾ ಮನುಷ್ಯರಲ್ಲಿಯೂ ದೇವರಿದ್ದಾನೆ ಬಡವ-ಶ್ರೀಮಂತ ದಲಿತ ಎಂಬ ಭೇದಭಾವವಿಲ್ಲದೆ ಪ್ರತಿಯೊಬ್ಬರಿಗೂ ಗೌರವ ನೀಡಬೇಕು ಈ ನಾಟಕ ವೀಕ್ಷಣೆ ಮಾಡಿದ್ದಕ್ಕೆ ಒಂದು ಅರ್ಥವಿರುತ್ತದೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಯಾವ ಗ್ರಾಮದಲ್ಲಿ ಆದರೂ ನಾಟಕ ಮಾಡಲಿ ಧನ ಸಹಾಯ ಮಾಡಿ ನಾಟಕ ಯಶಸ್ವಿಗೊಳಿಸಲು ಸಹಕರಿಸುತ್ತೇನೆ ಈ ಕ್ಷೇತ್ರದ ಗ್ರಾಮಸ್ಥರಲ್ಲಿ ಗ್ರಾಮಸ್ಥನಾಗಿ ಸಾಮಾನ್ಯರಲ್ಲಿ ಸಾಮಾನ್ಯ ವಾಗಿ ನಿಮ್ಮ ಮನೆ ಮಗನಾಗಿ ನಾನು ನಡೆಯುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದಿಬ್ಬೂರಹಳ್ಳಿ ಮುತ್ತೂರು ವೆಂಕಟೇಶ್, ರಾಜಣ್ಣ, ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಶ್ರೀನಿವಾಸ್ ರವರು, ಪ್ರಸನ್ನ, ಗೋಪಿನಾಥ್, ನಲ್ಲ ಚೆರುವನಹಳ್ಳಿ ವೆಂಕಟರೆಡ್ಡಿ, ಅಂಜನಪ್ಪ, ಮುರಳಿಧರ್, ಸೇರಿ ಬಂಡಹಳ್ಳಿಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು…
ವರದಿ ವೆಂಕಟೇಶ ಸಿ