ವಿಜಯನಗರ: ಕೊಟ್ಟೂರು ತಾಲೂಕಿನ ಉಜ್ಜಿನಿ ಗ್ರಾಮದಲ್ಲಿ ಸಾಕಷ್ಟು ವಿದ್ಯುತ್ ಸಮಸ್ಯೆ ಕಾಡುತ್ತಿದ್ದರಿಂದ ಗ್ರಾಮ ಸ್ವರಾಜ್ಯ ಪ್ರತಿಷ್ಠಾನದ ಅಧ್ಯಕ್ಷರು ಮತ್ತು ಸದಸ್ಯರು, ಮತ್ತು ಸಾರ್ವಜನಿಕರು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ-ನಿಯಮಿತ ಉಪ ವಿದ್ಯುತ್ ವಿತರಣಾ ಕೇಂದ್ರ ಉಜ್ಜಿನಿ, ಇಲ್ಲಿಗೆ ಭೇಟಿ ನೀಡಿದರು. ಈ ವೇಳೆ ಗ್ರಾಮ ಸ್ವರಾಜ್ ಪ್ರತಿಷ್ಠಾನದ ಅಧ್ಯಕ್ಷರಾದ ಡಾ||ರೇವಯ್ಯ ಒಡೆಯರ್ ರವರು ಸೆಕ್ಷನ್ ಆಫೀಸರ್ ಆದ ರಮೇಶ್, ಮತ್ತು AEE ಪ್ರಕಾಶ್ ಕೂಡ್ಲಿಗಿ, EE ರಾಮಚಂದ್ರ ಸುತರ ಹ.ಬಿ ಹಳ್ಳಿ ಇವರಿಗೆ ದೂರವಾಣಿ ಮೂಲಕ ಕರೆ ಮಾಡಿ ಪದೆ ಪದೇ ವಿದ್ಯುತ್ ಏಕೆ? ಹೋಗುತ್ತೆ ಈ ರೀತಿ ಆದರೆ ಜನ ಸಾಮಾನ್ಯರ ಗತಿಯೇನು? ಎಂದು ಪ್ರಶ್ನಿಸಿದರು.
ಅದು ಗಾಳಿ ಮಳೆಗೆ ಲೈನ್ ತೊಂದರೆ ಆಗಿ ವಿದ್ಯುತ್ ಪೂರೈಕೆಯಲ್ಲಿ ತೊಂದರೆ ಆಗುತ್ತದೆ ಸರ್ ಎಂದು ಹಾರಿಕೆ ಉತ್ತರ ನೀಡಿದರು.ಈ ರೀತಿ ಗಾಳಿ ಮಳೆ ನಮ್ಮೂರಲ್ಲಿ ಮಾತ್ರ ಇರುತ್ತಾ! ಬೇರೆ ಊರುಗಳಲ್ಲಿ ಇರಲ್ವಾ ಎಂದು ಪ್ರಶ್ನಿಸಿದರು. ಉಜ್ಜಿನಿ ಗ್ರಾಮದ ವ್ಯಾಪ್ತಿಯಲ್ಲಿ ಹಾಗೂ ಸುತ್ತಲಿನ ಹಳ್ಳಿಗಳ ಮನೆ ಮತ್ತು ರೈತರ ಪಂಪ್ ಸೆಟ್‌ಗಳಿಗೆ ತೊಂದರೆ ಆಗುತ್ತದೆ, ಅಲ್ಲದೇ ಗ್ರಾಮದಲ್ಲಿ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ಮಹಾರಥೋತ್ಸವ ಮತ್ತು ತೈಲಾಭಿಷೇಕ ನಡೆಯುವ ಸಂದರ್ಭದ ದಿನಗಳಲ್ಲಿ ಲಕ್ಷಾಂತರ ಜನ ಭಕ್ತಾದಿಗಳು ಊರಿಗೆ ಬಂದೋಗಿ ಉಳಿದು ಕೊಂಡಿದ್ದಾರೆ. ಒಂದು ದಿನಕ್ಕೆ 25 ಕ್ಕಿಂತಲೂ ಹೆಚ್ಚು ಬಾರಿ ವಿದ್ಯುತ್ ಹೋಗಿ ಬಂದಿದೆ. ಮೇ,1 ರಿಂದ 7 ರವರೆಗೆ 120 ಬಾರಿ ಹೋಗಿ ಬಂದಿದೆ. ವಿದ್ಯುತ್ ಹೋದರೆ 2-3 ಗಂಟೆಗಳ ಕಾಲ ಬರುವುದೇ ಇಲ್ಲ. ಇದರಿಂದ ನೀರಿನ ಸರಬರಾಜು ವ್ಯತ್ಯಯವಾಗಿ ಸಾರ್ವಜನಿಕರಿಗೆ ತೊಂದರೆ ಆಗಿರುತ್ತದೆ.
ಮಿಕ್ಸಿ,ಗ್ರೈಂಡರ್,ಹಿಟ್ಟಿನ ಗಿರಣಿಗಳು ಬೀಸಲಾರದೆ ಅಡುಗೆ ಮಾಡಲು ಸಹಾ ತೊಂದರೆ ಆಗಿದೆ ಮತ್ತು ಬೇಸಿಗೆ ಅದ್ದರಿಂದ ಫ್ಯಾನ್ ಓಡದೆ ವಯಸ್ಸಾದವರ ಸೆಖೆಯಲ್ಲಿ ಕುದ್ದು ಹೋಗಿದ್ದಾರೆ. ಕುಡಿಯುವ ನೀರಿನ ಘಟಕಗಳು ನೀರು ಒದಗಿಸಲು ಸಾಧ್ಯವಾಗಿಲ್ಲ ಈ ಎಲ್ಲಾ ತೊಂದರೆಗಳಿಂದಾಗಿ ಕೆಪಿಟಿಸಿಎಲ್/ಜೆಸ್ಕಾಂ ಕಂಪನಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕಿದ್ದಾರೆ.ಇಂತಹ ತೊಂದರೆ ಸರಿಪಡಿಸಲು ನಾವು ಅನೇಕ ಬಾರಿ ಮನವಿ ಮಾಡಿಕೊಂಡಿದ್ದೇವೆ. ಆದರೂ ಸರಿಪಡಿಸಿಲ್ಲ ಉಜ್ಜಿನಿ ಒ.ಸಿ.ಬಿ ಕೇಂದ್ರ ದಿಂದ ಕೆಲವು ಹಳ್ಳಿಗಳನ್ನು ಕೈ ಬಿಡಲು ಸಹಾ ಹೇಳಲಾಗಿತ್ತು, ಮತ್ತು ಹಗಲು ವೇಳೆ ವಿದ್ಯುತ್ ದೀಪಗಳು ಉರಿಯದಂತೆ ಕ್ರಮಕೈಗೊಳ್ಳಲು ಅನೇಕ ಬಾರಿ ಮನವಿ ಮಾಡಿದ್ದೇವೆ.
ಆದರೆ ಸರಿಪಡಿಸಿಲ್ಲ ತಾವೂ ಹೀಗೆ ಸರಿಪಡಿಸದೇ ಕಾಲಹರಣ ಮಾಡಿದರೆ.ಗ್ರಾಮದ ಜನತೆ ಮತ್ತು ಗ್ರಾಮ ಪಂಚಾಯತಿ ಸದಸ್ಯರು, ಹಾಗೂ ಗ್ರಾಮ ಸ್ವರಾಜ್ಯ ಪ್ರತಿಷ್ಠಾನ ದಿಂದ ಧರಣಿ ನಡೆಸಲಾಗುವುದು ಎಂದು ಗ್ರಾಮ ಸ್ವರಾಜ್ಯ ಪ್ರತಿಷ್ಠಾನದ ಅಧ್ಯಕ್ಷರಾದ ಡಾ|| ರೇವಯ್ಯ ಒಡೆಯರ್ ರವರು ವಿದ್ಯುತ್ ಕಂಪನಿಗಳಿಗೆ ಎಚ್ಚರಿಕೆ ನೀಡಿದರು. ಗ್ರಾಮ ಪಂಚಾಯತಿ ಸದಸ್ಯರಾದ ಸಿದ್ದೇಶ್.ಚೌಡಪ್ಪ. ಮತ್ತು ಕೆ.ಮಂಜುನಾಥ.ವಕೀಲರು ಮತ್ತು ನಾಗರಾಜ್, ವೈ ಚಿಲ್ಲಪರ್ ನಾಗರಾಜ್, ಸಿದೇಶ್, ಬಿ ಓಬಳೇಶ್, ಮುಂತಾದವರು ಹಾಜರಿದ್ದರು.
ಕೋಟ್,
ವಿದ್ಯುತ್ ಪದೆ ಪದೇ ಹೋಗುವುದರಿಂದ ಕುಡಿಯುವ ನೀರಿನ ಸಮಸ್ಯೆ ಜೊತೆಗೆ ಮಿಕ್ಸಿ, ಗ್ರೈಂಡರ್,ಹಿಟ್ಟಿನ ಗಿರಣಿಗಳು ಬೀಸಲಾರದೆ ಅಡುಗೆ ಮಾಡಲು ಸಹಾ ತೊಂದರೆ ಆಗಿದೆ. ಹಾಗಾಗಿ ವಿದ್ಯುತ್ ಕಂಬ ಮತ್ತು ಲೈನ್ ಗಳಲ್ಲಿ ಉಂಟಾಗುವ ಸಮಸ್ಯೆ ಸರಿಪಡಿಸಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸ ಆಗದಂತೆ ನೋಡಿಕೊಳ್ಳಲು ಗ್ರಾಮ ಸ್ವರಾಜ್ಯ ಪ್ರತಿಷ್ಠಾನದಿಂದ ಸಾಕಷ್ಟು ಸಲ ಮನವಿ ಮಾಡಲಾಗಿದೆ.ಆದರೆ ಸಂಬಂಧಿಸಿದವರು ಸರಿಪಡಿಸದೇ ಏಕೆ? ಕಾಲಹರಣ ಮಾಡುತ್ತಾರೆ ಎಂಬುದೇ ಯಕ್ಷಪ್ರಶ್ನೆಯಾಗಿದೆ. ಎಂದು ಸ್ಥಳಿಯರಾದ ನಾಗರಾಜ್. ವೈ
ವರದಿ: ಗುಡ್ಡಪ್ಪ. ಬಿ ಉಜ್ಜಿನಿ