ಬಬಲೇಶ್ವರ:- ಮಾಹಾಮಾರಿ ಕೋರೊನಾ ಹೊಡೆತಕ್ಕೆ ಗ್ರಾಮಗಳಲ್ಲಿನ ಜಾತ್ರೆಗಳ ಕಲರವ ಕಳೆಗುಂದಿತ್ತು. ಎಲ್ಲ ಗ್ರಾಮಗಳಲ್ಲಿ ಸತತವಾಗಿ ಎರಡು ವರ್ಷಗಳಿಂದ ಮನರಂಜೆನೆಗಳು ಮರಿಚಿಕೆಯಾಗಿ ನೆಪ ಮಾತ್ರವಾಗಿದ್ದವು. ಆದರೆ ಈ ವರ್ಷ ಮಾತ್ರ ಸ್ವಲ್ಪಮಟ್ಟಿಗೆ ಮಾಹಾಮಾರಿ ಕೋರನಾ ವೈರಸ್ ಕಡಿಮೆಯಾಗಿದೆ ಎಂದರೂ ತಪ್ಪಾಗಲ್ಲ.
ಹೌದು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ದಾಶ್ಯಾಳ ಗ್ರಾಮದಲ್ಲಿನ ಗ್ರಾಮ ದೇವರಾದ ಶ್ರೀ ವೀರಾಂಜನೆಯನ ಜಾತ್ರೆಯನ್ನು ಕೋವಿಡ್ ಕಾರಾನಾಂತರದಿಂದ ಆಚರಣೆ ಮಾಡದೆ ಇರುವದರಿಂದ ಈ ಬಾರಿ ಗ್ರಾಮದ ಎಲ್ಲ ವರ್ಗದ ಜನಾಂಗದವರು ಸೇರಿ ಈ ಜಾತ್ರೆಯನ್ನು ಅದ್ದೂರಿಯಾಗಿ ಮತ್ತು ವಿಜೃಂಭಣೆಯಿಂದ ಆಚರಣೆ ಮಾಡಿದರು.
ಸಸತವಾಗಿ ಮೂರು ದಿನಗಳ ಕಾಲ ನೆಡೆಯುವ ಈ ಜಾತ್ರೆಯಲ್ಲಿ ಒಂದು ನಿಮಿಷದ ಎತ್ತಿನ ಬಂಡಿ ಸರತಿ, ಸ್ಲೋ ಸೈಕಲ್ ಮೋಟಾರ ಸ್ಪರ್ಧೆ, ಟ್ರ್ಯಾಕ್ಟರ್ ರಿವರ್ಸ್ ಚಲಿಸುವ ಸ್ಪರ್ಧೆ, ಬೋಳ ದಿಂಡಿನ ಸ್ಪರ್ಧೆ ಮತ್ತು ಎರಡನೆ ದಿನ ಎತ್ತಿನ ಗಾಡಿ ಸ್ಪರ್ಧೆ, ಮ್ಯುಸಿಕಲ್ ಚೇರ್,ಪುರುಷರ ಓಟದ ಸ್ಪರ್ಧೆ ಗಳನ್ನು ಆಯೋಜನೆ ಮಾಡಿ ಜಿಲ್ಲೆಯ, ಬೇರೆಬೇರೆ ಜಿಲ್ಲೆಗಳಿಂದ ಬಂದಿರುವಂತಹ ಸ್ಪರ್ದಾರ್ಥಿಗಳನ್ನು ಆಡಿಸಿ ಬಹುಮಾನ ವಿತರಣೆ ಮಾಡಲಾಯಿತು.
ಮತ್ತು ಮೂರನೇ ದಿನ ಕಲ್ಲು ಮತ್ತು ಎತ್ತುವ ಸ್ಪರ್ಧೆ ನೆಡೆಸಲಾಯಿತು. ಕಲ್ಲು, ಗುಂಡು ಮತ್ತು ತುಂಬಿದ ಚಿಲ ಎತ್ತುವ ಸ್ಪರ್ಧೆ ಹಮ್ಮಿಕೊಂಡು ಅವರಿವರೆನ್ನದೆ ಎಲ್ಲ ಸ್ಪರ್ದಾಳುಗಳಿಗೆ ಸಮನಾದ ನಗದು ಬಹುಮಾನ ನೀಡಿ ಸತ್ಕರಿಸಲಾಯಿತು.
ಈ ಜಾತ್ರೆಯಲ್ಲು ಈ ವರ್ಷ ವಿಶೇಷೆಂದರೆ ಮೂರುಬದಿನಗಳ ಕಾಲ ಸತತವಾಗಿ ಜಾತ್ರೆಗೆ ಬಂದ ಭಕ್ತಾದಿಗಳಿಗೆ ಮಜ್ಜಗೆ ಸೇವೆ ಮಾಡಿ ಭಕ್ತಾದಿಗಳ ಧಾಹ ತಿರಿಸಿದರು. ನಂತರ ವೀರಾಂಜನೆಯನ ಓಕಳಿ ಕಂಬ ಹತ್ತುವದರ ಮೂಲಕ ನೀರು ಮತ್ತು ಕೆಸರು ಎರಚಾಡುತ್ತಾ ಕಂಬವನ್ನು ಹತ್ತಲು…. ನಾ…. ಮುಂದು ….ತಾ …..ಮುಂದು ಎಂದು ಓಕಳಿ ಕಂಬ ಏರರಿದರು. ಹಿರಿಯರ ಸಾಂಪ್ರದಾಯದಂತೆ ಎತ್ತಿನ ಬಂಡೆಗಳ ಮೇಲೆ ನೀರು ತಂದು ಓಕಳಿ ಆಡುತಿದ್ದರು ಎಂಬ ವಾಡಿಕೆ ಇತ್ತಂತೆ ಆದ ಕಾರಣ. ಈ ಬಾರಿ ಎತ್ತಿನ ಬಂಡಿಯ ಮೇಲೆ ನೀರು ತಂದು ಹಾಕಿ ಸಂಪ್ರದಾಯವನ್ನು ಉಳಿಸುವಲ್ಲಿ ಕಾರಣಿಬೂತರಾಗಿದ್ದಾರೆ. ಮತ್ತು ಈಗಿನ ನವ ಪಿಳಿಗೆಗಳಿಗೆ ಈ ಮೂಲಕ ತಿಳಿ ಹೇಳಲಾಯಿತು.
ನೀರೋಕಳಿ ಮುಗಿದ ನಂತರ ಬಣ್ಣದೊಕುಳಿ ಆಡುವ ವಾಡಿಕೆಯಂತೆ ಒಬ್ಬರಿಗೊಬ್ಬರು ಬಣ್ಣ ಎರಚಾಡುವದರ ಮೂಲಕ ಬಣ್ಣದೊಕುಳಿ ಆಡಿದರು.