ಜೇವರ್ಗಿ : ತಾಲೂಕಿನ ಮಲ್ಲಾ.ಕೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ SDMC ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಸದಸ್ಯರು ನೇಮಕವಾಗದ ಹಿನ್ನೆಲೆಯಲ್ಲಿ ಶಾಲೆಯ ಅಭಿವೃದ್ಧಿ ಕುಂಠಿತವಾಗಿರೋದು ಹಿಂದೆ ಎರಡು ಬಾರಿ SDMC ರಚನೆಗೆ ಆಯ್ಕೆ ವಿಚಾರದಲ್ಲಿ ಎಲ್ಲಾ SDMC ಸದಸ್ಯರು ಸಹಮತ ಇಲ್ಲದ ಕಾರಣ SDMC ರಚನೆ ರದ್ದಾಗಿದೆ ಆದಕಾರಣ ಶಾಲೆಯ ಕಾರ್ಯಗಳು ಅರ್ಧಕ್ಕೆ ನಿಂತವು ಹಿಂದೆ SDMC ಅಧ್ಯಕ್ಷರ ಅವಧಿಯಲ್ಲಿ ನಡೆದ ಬಿಸಿಊಟ ಕೋಣೆ ಅರ್ಧಕ್ಕೆ ನಿಂತಿದೆ ನಾವು ಮುಖ್ಯ ಶಿಕ್ಷಕರಿಗೆ ಕೇಳಿದರೆ SDMC ಅಧ್ಯಕ್ಷರು ನೇಮಕವಾಗದೆ ಇಲ್ಲದೆ ಇರುವುದರಿಂದ ನನಗೆ ಬಿಸಿಯೂಟ ಕೋಣೆ ಕಾಮಗಾರಿ ಪ್ರಾರಂಭ ಮಾಡಲಿಕ್ಕೆ ಇಂಚಾರ್ಜ್ ನೀಡದೆ ಇರುವುದರಿಂದ ಕೆಲಸ ಅರ್ಧಕ್ಕೆ ನಿಂತಿದೆ ಆದಕಾರಣ ಮುಂದಿನ ದಿನಗಳಲ್ಲಿ SDMC ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಸದಸ್ಯರು ನೇಮಕಮಾಡಿ ಶಾಲಾ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು ಎಂದು ಊರಿನ ಗ್ರಾಮಸ್ಥರ ಪರವಾಗಿ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ