ಯಡ್ರಾಮಿ:ಸಂವಿಧಾನದ ರಕ್ಷಣೆ ಅಗತ್ಯವಿದೆ ಎಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ ಅವರ ಮೊಮ್ಮಗ ಆಯುಷ್ಯಮಾನ ರಾಜರತ್ನ ಅಂಬೇಡ್ಕರ ಅವರು ಯಡ್ರಾಮಿ ಪಟ್ಟಣದಲ್ಲಿ ಡಾ.ಅಂಬೇಡ್ಕರ ೧೩೧ ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ. ದೇಶಕ್ಕೆ ಬಾಬಾ ಸಾಹೇಬರು ಉತ್ತಮ ಸಂವಿಧಾನ ನೀಡಿದ್ದಾರೆ.ಸಂವಿಧಾನ ಪ್ರೀತಿಸುವ ಕಾರ್ಯ ಮಾಡುತ್ತಿಲ್ಲ.ವಿರೂಧಿಸುವ ಮನೋಭಾವದ ವ್ಯಕ್ತಿಗಳು ಹೆಚ್ಚಾಗಿದ್ದಾರೆ. ಈ ದೇಶದಲ್ಲಿ ಮೋದಿ ಸರ್ಕಾರದಲ್ಲಿ ಇರುವ ಹಿಂದುತ್ವವಾದಿಗಳಿಂದ ಸಂವಿಧಾನ ಬದಲಾವಣೆ ಮಾಡುವ ಕೆಲಸಾ ಮಾಡುತ್ತಿದೆ.ಸಂವಿಧಾನ ಬದಲಾವಣೆ ಕೈ ಹಾಕಿದರೆ ಮತ್ತೆ ಎರಡನೇ ಕೊರೆಗಾಂವ್ ಸೃಷ್ಟಿಯಾಗುವುದು ಎಂದು ಮೋದಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಬಾಬಾ ಸಾಹೇಬರು ದೇಶದ ಪ್ರತಿಯೊಂದು ವರ್ಗದ ಜನರಿಗೆ ಸಮಾನತೆ ನೀಡುವ ಜೋತೆಗೆ ಕರ್ತವ್ಯ ಹಕ್ಕುಗಳು ನೀಡಿದ್ದಾರೆ ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸೂರ್ಯ,ಚಂದ್ರ ಕೇವಲ ಕೇಲವು ಸಮಯದಲ್ಲಿ ಇರುತ್ತಾರೆ.ಬಾಬಾ ಸಾಹೇಬರು ಪ್ರಪಂಚ ಇರುವರೆಗೂ ಶಾಶ್ವತವಾಗಿ ವಿಶ್ವದಲ್ಲಿ ವಿಶ್ವ ಜ್ಞಾನಿಯಾಗಿ,ವಿಶ್ವರತ್ನವಾಗಿ ಪ್ರಪಂಚದ ಜನಮನದಲ್ಲಿ ನೆಲೆಸಿದ್ದಾರೆ. ಈಗಿನ ಮಾಧ್ಯಮಗಳು ಕೇವಲ ಧರ್ಮಕ್ಕೆ ಸಿಮೀತವಾಗಿವೆ ಪ್ರಚಾರ ಮಾಡುತ್ತಿವೆ ಬಾಬಾ ಸಾಹೇಬರಿಗೆ ಮತ್ತು ನಮ್ಮ ಸಮುದಾಯಕ್ಕೆ ಆಗುವ ಅವಮಾನ,ಮೂರ್ತಿ ಅವಮಾನ,ಹಲ್ಲೆಗಳು ತೊರಿಸುವದ್ದಿಲ್ಲ.ಆದ್ದರಿಂದ ನಮ್ಮ ಸಮುದಾಯದ ಮಾಧ್ಯಮದ ಅವಶ್ಯಕತೆ ಇದೆ ವಿಶ್ವಮಟ್ಟದಲ್ಲಿ ಮಾಧ್ಯಮ ತೆಗೆಯುವ ಆಲೋಚನೆ ನಮ್ಮ ಬುದ್ಧಿಸ್ಟ್ ಟ್ರಸ್ಟ್ ಮಾಡಲು ತಮ್ಮ ಸಹಕಾರ ಅವಶ್ಯಕತೆ ಇದೆ ಎಂದು ಹೇಳಿದರು. ಜಿಟಿ ಜಿಟಿ ಮಳೆಯಲ್ಲಿಯೂ ಕೂಡ ರಾಜರತ್ನ ಅಂಭೇಡ್ಕರ್ ಒಂದು ಗಂಟೆಗಳ ಕಾಲ ಕೋಡೆ ಹಿಡಿದರು ಅಭಿಮಾನಿಗಳಿಗೆ ಇಲ್ಲದ ಕೋಡೆ ನನಗು ಬೇಡವೆಂದು ಭಾಷಣ ಮಾಡುವ ಮೂಲಕ ಸರಳತೆ ಮೇರೆದರು ಮುಖ್ಯ ಭಾಷಣಕಾರರಾಗಿ ಆಗಮಿಸಿದ ಡಾ.ಶಿವಕುಮಾಕ ನಿರ್ದೇಶಕರು ಅಕ್ಕ ಐ.ಎ.ಎಸ್.ಅಕಾಡೆಮಿ ನವದೆಹಲಿ ಮಾತನಾಡಿ. ಅಂಬೇಡ್ಕರ್ ಭಕ್ತರಾಗಬೇಡಿ ಅಂಬೇಡ್ಕರ್ ಅನುಯಾಯಿಯಾಗಬೇಕು. ಅಂಬೇಡ್ಕರ್ ಅವರನ್ನು ಹೃದಯದಲ್ಲಿ ಇಟ್ಟುಕೊಳ್ಳದೇ ತಲೆಗೆ ತೆಗೆದುಕೊಂಡು ಅವರ ಹಾಗೆ ಜ್ಞಾನವಂತರಾದ ಮಾತ್ರ ಅವರಿಗೆ ನಿಜವಾದ ಗೌರವ ಸಲ್ಲುತ್ತದೆ. ವಿದ್ಯಾರ್ಥಿಗಳು ಹಲವಾರು ಚಟಗಳಿಗೆ ದಾಸರಾಗದೆ ಸುದ್ದವಾಗಿ ಬದುಕಿದಾಗ ನಮ್ಮ ಸಮಾಜಕ್ಕೆ ಗೌರವ ಬರುತ್ತದೆ ಕೇವಲ ಜಯಂತಿ ಆಚರಣೆ ಮಾಡದೇ ಈ ಜಯಂತಿಯಿಂದ ಮುಂಬರುವ ಜಯಂತಿಯವರೆಗೆ ಈ ಜಯಂತೋತ್ಸವ ಸಮಿತಿಯವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಜೋತೆಗೆ ಉತ್ತಮ ಜೀವನ ರೂಪಿಸುವ ಕೆಲಸಾ ಮಾಡಬೇಕು.ಅದ್ದಕ್ಕೆ ನನ್ನ ಸಂಪೂರ್ಣ ಬೆಂಬಲ ಇರುತ್ತದೆ ಎಂದು ಹೇಳಿದರು. ಯಡ್ರಾಮಿ ಪಟ್ಟಣದಲ್ಲಿ ರಾಜಕೀಯ ರಹಿತವಾದ ಕಾರ್ಯಕ್ರಮ ಮಾಡಲಾಯಿತ್ತು ಈ ಕಾರ್ಯಕ್ರಮ ಜನರು ಬರುವುದಿಲ್ಲ ಎಂದು ಜನರು ಮಾತಾಡಿಕೊಳ್ಳುತ್ತಿದ್ದರು ರಾಜಕೀಯ ವ್ಯಕ್ತಿಗಳು ಬಂದರೆ ಮಾತ್ರ ಜನರು ಬರುತ್ತಾರೆ ಎಂದು ಅಂದುಕೊಂಡ ಜನರು ಭಾವನೆ ಹುಸಿಯಾಗಿ ಸಾವಿರಾರು ಸಂಖ್ಯೆಯಲ್ಲಿ ನಾನಾ ಕಡೆಯಿಂದ ಜನಸಾಗರವೆ ಹರಿದುಬಂದು ಯಡ್ರಾಮಿ ಎಲ್ಲಿನೋಡಿದರು ನಿಲಿಮಯವಾಗಿ ಕಂಗೊಳಿಸುತ್ತಿತ್ತು ಆಯುಷ್ಮಾನ ರಾಜರತ್ನ ಅಂಬೇಡ್ಕರ್ ಬರುತ್ತಿದಂತೆ ಸಾವಿರಾರು ಮಹಿಳೆಯರು ಸೇರಿ ಜೈ ಭೀಮ ಜೈ ಭೀಮ ಎಂಬ ಕೂಗು ಮುಗಿಲು ಮುಟ್ಟಿತ್ತು. ಬೆಳಿಗ್ಗೆಯಿಂದ ಪಟ್ಟಣದ ಬುದ್ಧ ವೃತ್ತದಿಂದ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಪ್ರಮುಖ ಬದಿಯ ಮೂಲಕ ಅಂಬೇಡ್ಕರ್ ಭಾವಚಿತ್ರ ಸರ್ದಾರ ಶರಣಗೌಡ ವೃತ್ತದವರೆಗೆ ಮೆರವಣಿಗೆ ಮಾಡಲಾಯಿತ್ತು. ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ಭಂತೇ ಧಮ್ಮನಾಗ ಹತ್ಯಾಳ ಬಸವಕಲ್ಯಾಣ, ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ವಿರಕ್ತಮಠ ಯಡ್ರಾಮಿ, ಪೂಜ್ಯ ವರದಾನಂದೇಶ್ವರ ಸ್ವಾಮಿಗಳು ವಾಲ್ಮೀಕಿ ಮಹರ್ಷಿ ಆಶ್ರಮ ಗೊಲಪಲ್ಲಿ,ಪೂಜ್ಯ ಬಳಿರಾಮ ಮಹಾರಾಜ ಸದ್ಗುರು ಸೇವಾಲಾಲ ಬಂಜಾರ ಶಕ್ತಿಪೀಠ ಗೊಬ್ಬರವಾಡಿ,ಪೂಜ್ಯ ಮಲ್ಲಣ್ಣಪ್ಪ ಮಹಾಸ್ವಾಮಿಗಳು ಅಲ್ಲಮಪ್ರಭು ಪೀಠ ತೊನಸನಹಳ್ಳಿ,ಶಕೀಲ ಸಾಬ್ ಹಜರತ್ ಖಾಜಾ ಇಜೇರಿ,ತಹಸೀಲ್ದಾರ ಶಾಂತಗೌಡ ಬಿರಾದಾರ, ತಾಲ್ಲೂಕು ಪಂಚಾಯಿತಿ ಇಒ ಮಹಾಂತೇಶ ಪುರಾಣಿಕ,ಯಡ್ರಾಮಿ ಠಾಣೆಯ ಪಿಎಸ್ಐ ಬಸವರಾಜ ಚಿತ್ತಕೊಟಿ,ಜಯಂತೋತ್ಸವ ಸಮಿತಿ ಗೌರವ ಅಧ್ಯಕ್ಷರು ಗುರಣ್ಣ ಕಾಚಾಪೂರ,ಅಧ್ಯಕ್ಷರು ಡಾ.ಪ್ರಕಾಶ ಬಡಗೇರ,ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಶಾಂತಪ್ಪ ಕುಡಲಗಿ,ಹಿರಿಯ ದಲಿತ ಮುಖಂಡರು ಚಂದ್ರಶೇಖರ ಹರನಾಳ,ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಮರೆಪ್ಪ ಬಡಗೇರ, ದಲಿತ ಹಿರಿಯ ಮುಖಂಡರು ಹಯ್ಯಾಳಪ್ಪ ಗಂಗಾಕರ್, ದಲಿತ ಯುವ ಮುಖಂಡರು ಗೋಲ್ಲಾಳಪ್ಪ ಗೇಜ್ಜಿ,ಸಾವಿರಾರು ಸಂಖ್ಯೆಯಲ್ಲಿ ದಲಿತ ಅಭಿಮಾನಿಗಳು ಹಾಗು ಸಮಿತಿಯ ಸದಸ್ಯರು ಇತರರು ಉಪಸ್ಥಿತಿರಿದ್ದರು.
ವರದಿ ಮಹೇಬೂಬ್ ನಡವಿನಮನಿ ಗೌಡ್ರು