ಹಿರೇಹಡಗಲಿ ಗ್ರಾಮದಲ್ಲಿ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ರಾಮಲಿಂಗೇಶ್ವರ ದೇವರಿಗೆ ಮತ್ತು ನಿಜ ಜೀವಕ್ಕೆ ಸಮಾಧಿಸ್ತರಾದ ಶ್ರೀ ಸದ್ಗುರು ಶಿವಯೋಗಿ ಹಾಲವೀರಾರ್ಯ ಸ್ವಾಮಿಗಳ ಕರ್ತೃ ಗದ್ದುಗೆ ಮತ್ತು ಪೂರ್ವ ಗುರುಗಳ ಗದ್ದಿಗೆ ಗಳಿಗೆ ಹಾಗೂ ಶ್ರೀಮಠದ ಶಕ್ತಿದೇವತೆ ಹಾವನೂರು ದ್ಯಾಮವ್ವ ದೇವಿಗೆ ಮಹಾ ರುದ್ರಾಭಿಷೇಕ ಜರುಗಿತು.ನಂತರ ಹತ್ತು ಗಂಟೆಗೆ ಅಡಿಗಲ್ಲು ಸಮಾರಂಭದ ನೇತೃತ್ವವನ್ನು ಮಾಜಿ ಸಚಿವರು ಶಾಸಕರು ಆದ ಪಿಟಿಪರಮೇಶ್ವರ್ ಭೂಮಿಪೂಜೆ ನೆರವೇರಿಸಿದರು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಮಳೆಯೋಗೀಶ್ವರ ಶಿವಾಚಾರ್ಯ ಸ್ವಾಮಿಗಳು ಮಾನಿಹಳ್ಳಿ ಪುರವರ್ಗಮಠದ ಮಾನಿಹಳ್ಳಿ,ಶ॥ ಬ್ರ॥ ಮರುಳಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಸಿದ್ಧೇಶ್ವರ ಸಂಸ್ಥಾನಮಠ ಅಳವುಂಡಿ.ಈ ಕಾರ್ಯಕ್ರಮದಲ್ಲಿ ಶ್ರೀಮಠದ ಎಲ್ಲ ಪರಮಪೂಜ್ಯ ಶ್ರೀ ಮಠದ ಮರಿ ದೇವರುಗಳು ಉಪಸ್ಥಿತರಿದ್ದರು.ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ವಿಶ್ವೇಶ್ವರ ಪಂಡಿತರಾಧ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಶ್ರೀ ರಾಮಕೃಷ್ಣ ರೆಡ್ಡಿ ಚೇರ್ಮನ್ ಮೈಲಾರ್ ಶುಗರ್ಸ್ ಶ್ರೀ ಬಿ ನಾಡ ಗೌಡ್ರು ಸಂಸ್ಥಾಪಕ ಅಧ್ಯಕ್ಷರು ಮಾನ್ಯತಾ ಪಬ್ಲಿಕ್ ಕಾಲೇಜ್ ಕುರುಬರಹಳ್ಳಿ,ಈಡಿಗರ ಸಾವಿತ್ರಮ್ಮ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಗ್ರಾಮ ಪಂಚಾಯಿತಿ ಭಾಗಿಯಾಗಿದ್ದರು. ಶ್ರೀಮದ್ ಸದ್ಗುರು ಶಿವಯೋಗಿ ಮಂದಿರದ ವತಿಯಿಂದ ಷ ಬ್ರ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ವೇದ ಆಗಮ ಸಂಸ್ಕೃತ ಸಂಗೀತ ಪಾಠಶಾಲೆ,ಶ್ರೀ ಸದ್ಗುರು ಶಿವಯೋಗಿ ಹಾಲ ಶಂಕರ ಸ್ವಾಮೀಜಿ ಯೋಗ ಧ್ಯಾನ ಮಂದಿರ,ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಂಗಳ ಮಂದಿರ,ಶ್ರೀ ಗ್ರಾಮದೇವತೆ ವೃದ್ಧಾಶ್ರಮ,ಮಾತ್ರೋಶ್ರೀ ಹಾಲಮ್ಮ ತಾಯಿ ಗೋಶಾಲೆ,ಶ್ರೀ ಗುರುಮೂರ್ತಿ ಸ್ವಾಮೀಜಿ ಆಯುರ್ವೇದ ಪ್ರಕೃತಿ ಚಿಕಿತ್ಸಾಲಯ,ಈ ಎಲ್ಲಾ ಕಟ್ಟಡ ಸಂಕೀರ್ಣಗಳು ಅಂದಾಜು ವೆಚ್ಚ ಆರು ಕೋಟಿ ರೂಪಾಯಿಗಳಿಂದ ಎಂದು ಅಂದಾಜಿಸಲಾಗಿದೆ. ಈ ಶುಭ ಸಮಾರಂಭದಲ್ಲಿ ಗ್ರಾಮದ ಮುಖ್ಯಸ್ಥರಾದ ಚರಣ್ ಗುಂಡಿ,ಅಂಗಡಿ ಶಿವಯೋಗಿ ಎಂ.ಪ.ಎಂ.ಶಾಂತಯ್ಯ ಬಳ್ಳೂಳ್ಳಿ ವೀರಣ್ಣ,ಸೋಮಶೇಖರ ಹಲಗೇರಿ ಹಳ್ಳಳ್ಳಿ ತಿರುಕಯ್ಯ, ಮಹೇಶಪ್ಪ ಹಲವು ಮುಖಂಡರು ಭಾಗಿಯಾಗಿದ್ದರು.