ಬಾಗಲಕೋಟ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣವು ತಾಲೂಕು ಆಗಲು ಅನಿರ್ದಿಷ್ಟ ಸರದಿ ಸತ್ಯಾಗ್ರಹ 19ನೇ ದಿನಕ್ಕೆ ಕಾಲಿಟ್ಟಿದ್ದು ಇಂದು ಗಾಣಿಗ ಸಮಾಜದವರು ಎಲ್ಲ ಹಿರಿಯರು ಮತ್ತು ಕಿರಿಯರು ಭಾಗಿಯಾಗಿ ಮಹಾಲಿಂಗಪುರ್ ತಾಲೂಕು ಆಗಲು ಬೆಂಬಲವನ್ನು ಸೂಚಿಸಿದರು ನಂತರದಲ್ಲಿ ಚಿಮ್ಮಡ ಗ್ರಾಮದ ವಿರಕ್ತಮಠ ಶ್ರೀ ಗುರು ಶ್ರೀ ಪ್ರಭುಲಿಂಗೇಶ್ವರ ಮಹಾನ್ ಗುರುಗಳು ಬಂದು ತಾಲೂಕು ಹೋರಾಟ ಮಾಡಲು ಬೆಂಬಲ ನೀಡಿದರು, ಮುಂದೆ ಇವತ್ತು ಜನರು ನಾಗರಮುನ್ನೋಳ್ಳಿ ಇಂದ ಕೂಡಲಸಂಗಮಕ್ಕೆ ಹೋಗುತ್ತಿದ್ದ ಭಕ್ತಾದಿಗಳು ಬಂದು ನಮ್ಮ ಹೋರಾಟಕ್ಕೆ ಬೆಂಬಲವನ್ನು ನೀಡಿ ಮುಂದೆ ಅವರ ಪ್ರಯಾಣವನ್ನು ಮುಂದೆವರಿದ್ದರು ನಂತರದಲ್ಲಿ ಮಾನ್ಯ ಜಮಖಂಡಿಯ ಶಾಸಕರಾದ ಆನಂದ್ ಸಿದ್ದು ನ್ಯಾಮಗೌಡ ಅವರು ಬಂದು ತಮ್ಮ ಗಾಣಿಗ ಸಮಾಜವನ್ನು ಬೆಂಬಲವನ್ನು ನೀಡಿ ಮಾಲಿಂಗಪುರ್ ತಾಲೂಕು ಆದರೆ ಜಮಖಂಡಿ ಕೂಡ ಜಿಲ್ಲೆ ಆಗುತ್ತದೆ ಎಂದು ಹೇಳಿ ನಾವು ಕೂಡ ನಿಮ್ಮ ಸದಾಕಾಲ ಬೆಂಬಲಕ್ಕೆ ಇರುತ್ತೇವೆ ಎಂದು ಹೇಳಿದರು ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಹುಲ್ ಕಲ್ಲುತಿ ಅವರು ಕೂಡ ಬಂದು ಹೋರಾಟದಲ್ಲಿ ತಾಲೂಕು ಆಗಲು ಎಲ್ಲ ರೀತಿಯ ಸಹಾಯ ಸಹಕಾರವನ್ನು ಮಾಡಿ ಭರವಸೆ ನೀಡಿದರು ಕೊನೆಗೆ ಸನ್ಮಾನ್ಯ ಶ್ರೀ ಸವದಿ ಅವರು ಮತ್ತು ಹಿರಿಯರಾದ ಎಸ್ ಆರ್ ಪಾಟೀಲ್ ಅವರು ಕೂಡ ಬಂದು ಹೋರಾಟ ಸಮಿತಿ ಪಾಲ್ಗೊಂಡು ಯಾವುದೇ ರೀತಿಯಲ್ಲಿ ಅನುಮಾನವಿಲ್ಲದೆ ತಾಲೂಕು ಮಾಡುವುದಾಗಿ ಮಾನ್ಯ ಶ್ರೀ ಮುಖ್ಯಮಂತ್ರಿಗಳ ಮನವಿ ನೀಡುತ್ತೇವೆ ಎಂದು ಕಾರ್ಯಕ್ರಮದಲ್ಲಿ ಹೇಳಿದರು.ಮತ್ತು ಎಲ್ಲಾ ಮುಖಂಡರು ಭಾಗಿಯಾಗಿದ್ದರು.