ಕೊಟ್ಟೂರು: ಮೇ,2 ತಾಲೂಕಿನ ಉಜ್ಜಿನಿ ಗ್ರಾಮದಲ್ಲಿ ಕಂಡು ಬಂದಿದ್ದು ಹೀಗೆ!? ಪುಟಾಣಿ ಮಕ್ಕಳ ಕೈಯಲ್ಲಿದೆ ಕನಸಿನ ಭಾರತ, ಹೌದು! ನೀವು ಭ್ರಷ್ಟ ರಹಿತವಾದ ಸೇವೆ ಪಡೆಯುವ ಸಲುವಾಗಿ ತೆರಿಗೆ ಕಟ್ಟುವ ಮೂಲಕ ಸರ್ಕಾರಿ ಮತ್ತು ಇತರೆ ಇಲಾಖಾ ಕಚೇರಿಗಳನ್ನು ಸ್ಥಾಪಿಸಿ ಕೊಂಡಿದ್ದೀರಿ.ಜೊತೆಗೆ ಉತ್ತಮ ಸೇವೆ ನೀಡುವಂತಹ ನೌಕರರನ್ನು ಸಹಾ ನೇಮಕ ಮಾಡಿಕೊಂಡಿದ್ದೀರಿ. ನಿಮಗೆಲ್ಲಾ ಸೇವೆ ನೀಡುವಂತ ಸರಕಾರಿ ಮತ್ತು ಇತರೆ ಇಲಾಖೆ ನೌಕರರಿಗೆಲ್ಲಾ ನಿಮ್ಮ ತೆರಿಗೆ ಹಣದಿಂದಲೇ ಸಂಬಳವನ್ನು ಸಹಾ ನೀಡುತ್ತಿದ್ದೀರಿ. ಜೊತೆಗೆ ಅವರ ಕುಟುಂಬ ನಿರ್ವಹಣೆಗೆ ಸಾಕಷ್ಟು ಸೌಲಭ್ಯಗಳನ್ನು ಸಹಾ ಕಲ್ಪಿಸಿಕೊಟ್ಟಿದ್ದೀರಿ.ಇಷ್ಟೆಲ್ಲಾ ಸವಲತ್ತು ನೀಡಿದ್ದರೂ ನಿಮ್ಮ ಸೇವೆ ಪಡೆಯಲು ಒಮ್ಮೊಮ್ಮೆ ಲಂಚ ಕೊಡುವುದಂತೂ ತಪ್ಪಿಲ್ಲ ಅದ್ದರಿಂದ ತಾವು ದಯವಿಟ್ಟು ನಮಗೆ ಭ್ರಷ್ಟ ರಹಿತ ಶಿಕ್ಷಣ ಕೊಡಿಸಿ, ಕನಸಿನ ಭಾರತ ನಮ್ಮ ಕೈಯಲ್ಲಿದೆ, ಎನ್ನುವಂತೆ ಮಕ್ಕಳ ಕೈಯಲ್ಲಿ ಕನಸಿನ ಭಾರತ ಕಂಡು ಬಂದಿದ್ದು ಹೀಗೆ.
ವರದಿ: ಗುಡ್ಡಪ್ಪ. ಬಿ ಉಜ್ಜಿನಿ