ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿಂದು 75 ನೇಯ ಸ್ವಾತಂತ್ರೋತ್ಸವದ ಪ್ರಯುಕ್ತವಾಗಿ ನಗರದ ಬಸವೇಶ್ವರ ಜೂನಿಯರ್ ಕಾಲೇಜ ಮೈದಾನದಲ್ಲಿ ಉಚಿತ ಆರೋಗ್ಯ ಮೇಳ ನಡೆಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. ಪ್ರಭಾಕರ್ ಕೋರೆ ಕೆಎಲ್ಇ ಸಂಸ್ಥೆ. ಎಸ್ ಡಿ ಎಂ ನಾರಾಯಣ ಹೃದಯಾಲಯ ಆಸ್ಪತ್ರೆ ಧಾರವಾಡ. ಈಣ್ಣು ವಿವಿಧ ಇಲಾಖೆಯ ಸಹಯೋಗದೊಂದಿಗೆ ಉಚಿತ ಆರೋಗ್ಯ ಶಿಬಿರ ನಡೆಯಿತು, ಈ ಕಾರ್ಯಕ್ರಮದ ಉದ್ಘಾಟನೆಯನ್ನು ರಾಮದುರ್ಗ ತಾಲೂಕಿನ ಶಾಸಕರಾದ ಮಾದೇವಪ್ಪ ಯಾದವಾಡ ರವರು ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಮ್ಮ ದೇಶದಲ್ಲಿ ಪ್ರತಿಯೊಬ್ಬರೂ ಆರೋಗ್ಯವಾಗಿರಬೇಕೆಂದು ನಮ್ಮ ಪ್ರಧಾನಿಯವರ ಆಸೆಯಾಗಿದ್ದ ಅನೇಕ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ಸೇವೆ ತಂದಿದ್ದಾರೆ. ಅವುಗಳನ್ನು ಸಾರ್ವಜನಿಕರು ಸರಿಯಾಗಿ ಉಪಯೋಗ ಮಾಡಿಕೊಳ್ಳಿ ಮತ್ತೆ ಕರೂಣಾ 4ನೇ ಅಲೆಗೆ ಯಾರು ಹೆದುರುವ ಅವಶ್ಯಕತೆ ಇಲ್ಲಾ ಎಂದು ಧೈರ್ಯ ತುಂಬಿದರು. ಆರೋಗ್ಯ ಮೇಳಕ್ಕೆ ಬಂದಂತಹ ಗ್ರಾಮೀಣ ಸಾರ್ವಜನಿಕರು ಆರೋಗ್ಯ ಮೇಳದಲ್ಲಿ 12 ರೀತಿಯ ತಜ್ಞ ವೈದ್ಯರಿಂದ ಸೇವೆಯ ನ್ನು ಪಡೆದುಕೊಂಡರು. ಗ್ರಾಮೀಣ ಪ್ರದೇಶ ದಿಂದ ಬಂದಂತಹ ಸಾರ್ವಜನಿಕರಿಗೆ ಊಟದ ವ್ಯವಸ್ಥೆಯ ನ್ನು ಮಾಡಲಾಗಿದ್ದು, ರಾಮದುರ್ಗ ತಾಲೂಕಿ ನಲ್ಲಿ ಉಚಿತ ಆರೋ ಗ್ಯ ಶಿಬಿರ ಯಶಸ್ವಿ ಕಂಡುಬಂತು. ಈ ಕಾರ್ಯಕ್ರಮದಲ್ಲಿ ತಾಲೂಕ ವೈದ್ಯಾಧಿಕಾ ರಿಗಳಾದ ಡಾ.ನಿರ್ಮ ಲಾ ಹಂಜಿ. ಡಾ.ತಡ ಹಾಳ. ಡಾ.ಆನಂದ ಬಾಳಿ. ತಾಲೂಕಾ ದಂಡಾಧಿಕಾರಿಗಳಾದ ಮಲ್ಲಿಕಾರ್ಜುನ ಹೆಗ್ಗಣ್ಣವರ್. ಶಿಶು ಅಭಿವೃದ್ಧಿ ಇಲಾಖೆಯ ಸಿಂಗಾರವ್ವ ವಂಟಮುರಿ. ಪುರಸಭೆ ಅಧ್ಯಕ್ಷರಾದ ಶಂಕರ ಬೆನ್ನೂರು. ಉಪಾಧ್ಯಕ್ಷರಾದ ರಾಘವೇಂದ್ರ ದೊಡ್ಡಮನಿ. ಬಿಜೆಪಿ ಮುಖಂಡರಾದ ರಾಜು ಬಿಳಗಿ. ಧನಲಕ್ಷ್ಮಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಮಲ್ಲಣ್ಣ ಯಾದವಾಡ. ಪುರಸಭೆ ಮುಖ್ಯಾಧಿಕಾರಿ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರವೀಣ್ ಕುಮಾರ್ ಸಾಲಿ. ಅಂಗನವಾಡಿ ಕಾರ್ಯಕರ್ತಿಯರು ಆಶಾ ಕಾರ್ಯಕರ್ತರು ಹಾಗೂ ಪೊಲೀಸ್ ಸಹ ಸಿಬ್ಬಂದಿಗಳು ಭಾಗಿಯಾಗಿದ್ದರು.
ವರದಿ ರಾಮಚಂದ್ರ ಹ ಕುಕಡಿ ಚಿಲಮೂರ