ಕೊಟ್ಟೂರು ಕ್ರಿಕೆಟ್ ನಮ್ಮ ದೇಶದಲ್ಲಿ ಹೆಚ್ಚು ಜನ ಪ್ರೀಯ ಕ್ರೀಡೆ. ನನಗೆ ಮೂರು ಮಕ್ಕಳಾದಗ. ಪ್ರಥಮ ಸಾರಿ ಎಂ.ಎಲ್.ಎ. ಚುನಾವಣೆಯಲ್ಲಿ ಪರಾಭವಗೊಂಡಾಗಲೂ ಹುಡುಗರೊಂದಿಗೆ ಕ್ರಿಕೇಟ್ ಆಡುತ್ತಿದ್ದನ್ನು ಶಾಸಕ ಭೀಮನಾಯ್ಕ ಹೇಳಿದರು. ತಾಲೂಕಿನ ಹರಾಳು ಗ್ರಾಮದಲ್ಲಿ ಭಜರಂಗಿ ಬಾಯ್ಸ್ ಹಮ್ಮಿಕೊಂಡಿದ್ದ ನಾಲ್ಕನೆ ವರ್ಷದ ಮೂರು ದಿನಗಳ ಸ್ಟೆಂಪರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಗೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಹೆಚ್ಚು ಪ್ರತಿಭಾವಂತ ಕ್ರಿಕೆಟ್ ಆಟಗಾರರಿದ್ದಾರೆ. ಅಂತಹವರಿಗೆ ರಣಜಿ. ಟೀಂ ಇಂಡಿಯಾದಲ್ಲಿ ಅವಕಾಶ ಸಿಗಲಿ ಎಂದು ಶುಭಕೋರಿದರು. ಜಿಪಂ ಮಾಜಿ ಸದಸ್ಯ ಹರ್ಷವರ್ಧನ ತಮ್ಮ ಬಾಲ್ಯದ ಕ್ರಿಕೆಟ್ ದಿನಗಳನ್ನು ನೆನಪು ಮಾಡಿಕೊಂಡರು. ನಂತರ ಶಾಸಕ ಭೀಮನಾಯ್ಕ. ಟೂರ್ನಮೆಂಟ್ ಗೆ ಚಾಲನೆ ನೀಡಿ. ಬೌಂಡರಿ ಬಾರಿಸುವ ಮೂಲಕ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಿದರು. 35ಕ್ಕೂ ಹೆಚ್ಚು ತಂಡಗಳು ಈ ಟೂರ್ನಮೆಂಟ್ ನಲ್ಲಿ ಭಾಗವಹಿಸಿವೆ. ಹರಾಳು ಗ್ರಾಮದ ರಾಮಮೂರ್ತಿ. ದಂಡೆಪ್ಪ. ಸುಧಾಕರ ಪಾಟೇಲ್. ಯರಿಸ್ವಾಮಿ. ಬೂದಿ ಶಿವಕುಮಾರ್ ಮುಂತಾದವರಿದ್ದರು.
ಅಡವಿ ಬಸಪ್ಪ ಪ್ರಾರ್ಥಿಸಿದರು.