ನನ್ನ ಕಷ್ಟ ಯಾರ ? ಬಳಿ ಹೇಳಿಕೊಳ್ಳಲೀ………|ಪ|
ಹಳ್ಳ ಕೊಳ್ಳ ಮುಚ್ಚಿ ಮನೆ ಕಟ್ಯಾರ್ವಾರೇ
ಕುಡಿಯಲು ನೀರು ಇಲ್ದಂಗ ಮಾಡ್ಯಾರ್ವೇ…….|01|
ನನ್ನ ಕಷ್ಟ ಯಾರ ? ಬಳಿ ಹೇಳಿಕೊಳ್ಳಲೀ……..|ಪ|
ಗಟ್ಟಿ ಮರವ ಕಡಿದು ಮನೆಯ ಕಟ್ಯಾರ್ವೇ
ನನಗೂ ಮನೆಯು ಇಲ್ದಂಗ ಮಾಡ್ಯಾರ್ವೇ……..|02|
ನನ್ನ ಕಷ್ಟ ಯಾರ ? ಬಳಿ ಹೇಳಿಕೊಳ್ಳಲೀ………|ಪ|
ಗಟ್ಟಿ ಮರವ ಕಡಿದು ಮನೆಯ ಕಟ್ಯಾರ್ವೇ
ತಂದೆ, ತಾಯಿಂದ, ನನ್ನ ದೂರ ಮಾಡ್ಯರ್ವಾರೇ….|03|
ನನ್ನ ಕಷ್ಟ ಯಾರ ? ಬಳಿ ಹೇಳಿಕೊಳ್ಳಲೀ…………|ಪ|
ಗಟ್ಟಿ ಮರವ ಕಡಿದು ಮನೆಯ ಕಟ್ಯಾರ್ವೇ
ಗೆಳೆಯ ಗೆಳತಿಯಿಂದ ನನ್ನ ದೂರ ಮಾಡ್ಯಾರ್ವೇ…|04|
ನನ್ನ ಕಷ್ಟ ಯಾರ ? ಬಳಿ ಹೇಳಿಕೊಳ್ಳಲೀ………..|ಪ|
ಬಗೆ ಬಗೆಯ ಮರ ಕಡಿದು ರಸ್ತೆ ಮಾಡ್ಯಾರ್ವೇ
ಬಂಧು ಬಳಗದೊಂದಿಗೆ ಇದ್ದ ದಾರಿ ತಪ್ಸ್ಯಾರೇ…..|05|
ನನ್ನ ಕಷ್ಟ ಯಾರ ? ಬಳಿ ಹೇಳಿಕೊಳ್ಳಲೀ……………|ಪ|
ಗಟ್ಟಿ ಮರವ ಕಡಿದು ಮನೆಯ ಕಟ್ಯಾರ್ವೇ
ಬಂಧು ಬಳಗನೆಲ್ಲಾ ಬಿಸಿಲಿನಲ್ಲಿ ಸಾಯಕಬಿಟ್ಟಾರ್ವೇ…|06|
ಗುಡ್ಡಪ್ಪ. ಬಿ ಉಜ್ಜಿನಿ