ಬಳ್ಳಾರಿ: ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ನಗರದ ಸಿರುಗುಪ್ಪ ರಸ್ತೆಯ ಬಸ್ ಡಿಪೋದಿಂದ (ಮಡಿಕೇರಿ ಆಂಜನೇಯ ದೇವಸ್ಥಾನದ) ಎಸ್.ಪಿ. ವೃತ್ತದ ಬಿಜೆಪಿ ಕಛೇರಿವರೆಗೆ ಶೋಭಾಯಾತ್ರೆಯನ್ನು ನಡೆಸಲಾಯಿತು. ಶೋಭಾಯಾತ್ರೆಗೆ ವಿಧಾನಪರಿಷತ್ ಸದಸ್ಯರಾದ ವೈ.ಎಂ.ಸತೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಗೋನಾಳ್ ಮುರಹರಿಗೌಡರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ್‌ನಾಯ್ಡು, ಪಾಲಿಕೆ ಸದಸ್ಯರಾದ ಕೆ.ಎಸ್.ಅಶೋಕ್‌ಕುಮಾರ್, ತಿಮ್ಮಾರೆಡ್ಡಿ, ಡಾ. ಮಹಿಪಾಲ್, ನಗರ ಘಟಕ ಅಧ್ಯಕ್ಷ ಕೆ.ಬಿ.ವೆಂಕಟೇಶ್ವರ, ರಾಜ್ಯ ರೈತಮೋರ್ಚಾ ಉಪಾಧ್ಯಕ್ಷರ ಗುರುಲಿಂಗನಗೌಡ, ಪ್ರಧಾನ ಕಾರ್ಯದರ್ಶಿ, ರಾಮಾಂಜನಿ, ಸುನೀಲ್‌ರೆಡ್ಡಿ, ಪಾಟೀಲ್, ಸುಮಾರೆಡ್ಡಿ, ಪದ್ಮಾವತಿ, ಭಾಸ್ಕರ್, ಬಳ್ಳಾರಿ ಜಿಲ್ಲಾ ಬಿಜೆಪಿ ಮಾಧ್ಯಮ ಸಹ ಪ್ರಮುಖ್ ರಾಜೀವ್ ತೊಗರಿ, ಓಬಿಸಿ ಮೋರ್ಚಾ ಅಧ್ಯಕ್ಷ ಸಂದೀಪ್ ನಂದಿಪಿ, ವಿಜಯಲಕ್ಷಿö್ಮ, ಪುಷ್ಪಲತಾ, ಭರತ್, ಮಾರುತಿ, ಪ್ರಹ್ಲಾದ್, ರಾಜೇಶ್, ಜ್ಯೋತಿಪ್ರಕಾಶ್ ಇವರುಗಳು ಶೋಭಾಯತ್ರೆಯಲ್ಲಿ ಪಾಲ್ಗೊಂಡಿದ್ದರು.