60 total views
ಹೊಳಲು: ಹೂವಿನಹಡಗಲಿ ತಾಲೂಕಿನ ಮಿರಾಕೊರನಹಳ್ಳಿ ಗ್ರಾಮದ ನವೀನ್ ಎಂಬ ಯುವಕ ನೇಪಾಳ ಮತ್ತು. ದುಬೈಯ್‌ನಲ್ಲಿ ನೆಡೆಯುವ ರಾಷ್ಟ್ರಮಟ್ಟದ ಕಿರಿಯರ ಕ್ರಿಕೆಟ್ ಟೂರ್ನಿಗೆ ಆಯ್ಕೆಯಾಗಿದ್ದಾನೆ.
ಕಿತ್ತು ತಿನ್ನುವ ಬಡತನ ಮದ್ಯಯು ಸಾಧನೆ ಮಾಡಿದ ಯುವ ಪ್ರತಿಭೆ ಚಿಕ್ಕವಯಸ್ಸಿನಲ್ಲೇ ತಂದೆ ತಾಯಿಯನ್ನು ಕಳೆದು ಕೊಂಡು ಈಗ ತನ್ನ ಅಜ್ಜಿಯ ಆಸರೆಯಲ್ಲಿ ಜೀವನ ನಡೆಸುತ್ತಿದ್ದಾನೆ.
ಈತನ ಅಜ್ಜಿಯೂ ಬಿ.ಪಿ.ಎಲ್. ಕಾರ್ಡನ ಅಕ್ಕಿಯನ್ನೇ ನಂಬಿಕೊAಡು. ತನ್ನ ತಿಂಗಳ ವೃದ್ಯಾಪ ವೇತನದಲ್ಲೇ ಮೊಮ್ಮಗನನ್ನು ಓದಿಸುತ್ತಿದ್ದಾಳೆ. ಸದ್ಯ ಮಿರಾಕೊರನಹಳ್ಳಿ ಶರಣಬಸವೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಅಭ್ಯಾಸ ಮಾಡುತ್ತಿರುವ ಯುವಕನಿಗೆ ನೇಪಾಳ ಮತ್ತು. ದುಬೈಯ್‌ನಲ್ಲಿ ನೆಡೆಯುವ ರಾಷ್ಟ್ರಮಟ್ಟದ ಕಿರಿಯರ ಕ್ರಿಕೆಟ್ ಪಂದ್ಯಾವಳಿಗೆ ಹೋಗಲು ಆರ್ಥಿಕ ನೆರವು ಬೇಕಾಗಿದೆ.
ನವೀನ್ ತಾಲೂಕಿನ ಇತರೆ ಜಿಲ್ಲೆಗಳ ಹಳ್ಳಿಗಳಲ್ಲಿ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾನೆ. ೨೦೨೧ರಲ್ಲಿ ಹುಬ್ಬಳ್ಳಿಯ ತೇಜ ಸಿರುಗುಪ್ಪಿ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದುಕೊಂಡು ನಂತರ ಜೋರ್‌ದಾರ್ ಕ್ರಿಕೆಟ್ ಸಂಸ್ಥೆಗೆ ಆಯ್ಕೆಯಾಗಿ ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಿಗಳಲ್ಲಿ ಭಾಗವಹಿಸಿ ಉತ್ತಮ ಬೌಲಿಂಗ್ ಪ್ರದರ್ಶನ ಮಾಡಿದ್ದಾನೆ. ಗೋವಾ ಹಾಗೂ ಶ್ರಿಲಂಕಾದಲ್ಲಿ ನಡೆದ ಹಲವಾರು ಪಂದ್ಯಗಳಲ್ಲಿ ಭಾವಹಿಸಿದ್ದಾನೆ.
ಗಂಟೆಗೆ ೧೨೮ಕಿ.ಮೀ. ವೇಗದಲ್ಲಿ ಔಟ್ ಸ್ಪಿçಂಗ್, ಇನ್ ಸ್ಪಿಂಗ್‌ಗಳ ಮೂಲಕ ವೇಗದ ಬೌಲರ್ ಎಂದು ಗುರುತಿಸಿಕೊಂಡಿದ್ದಾನೆ.
ಗೋವಾದಲ್ಲಿ ನಡೆದ ಕಿರಿಯರ ಕ್ರಿಕೆಟ್ ಪಂದ್ಯದಲ್ಲಿ ಜೋರ್‌ದಾರ್ ಕ್ರಿಕೆಟ್ ಸಂಸ್ಥೆಯ ಮೂಲಕ ರಾಜ್ಯವನ್ನು ಪ್ರತಿನಿಧಿಸಿ ಬಿಹಾರ್ ತಂಡದ ವಿರುದ್ದ ೨೩ರನ್ ನೀಡಿ ೪ ವಿಕೆಟ್ ಪಡೆದಿದ್ದನು. ಟೂರ್ನಿಯಲ್ಲಿ ೯ವಿಕೆಟ್ ಕಬಳಿಸಿ, ಟೂರ್ನಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾನೆ. ಕರ್ನಾಟಕ ತಂಡ ಚಾಂಪಿನ್ ಪಟ್ಟ ಪಡೆಯುವಲ್ಲಿ ಈತನ ಬೌಲಿಂಗ್ ಮಹತ್ವದ್ದಾಗಿತ್ತು ಎನ್ನಲಾಗಿದೆ.
ಎಪ್ರಿಲ್ ೮ರಂದು ನೇಪಾಳ ಮತ್ತು. ದುಬೈಯ್‌ನಲ್ಲಿ ನೆಡೆಯುವ ರಾಷ್ಟç ಮಟ್ಟದ ಕಿರಿಯರ ಕ್ರಿಕೆಟ್ ಪಂದ್ಯಾವಳಿಗೆ ಭಾಗವಹಿಸಲು ಆರ್ಥಿಕವಾಗಿ ಸಹಾಯ ಬೇಕಾಗಿದೆ. ಈತನ ಸಹಾಯಕ್ಕೆ ಹಣಕಾಸು ನೆರವನ್ನು ಕೊಡುವವರು ೮೨೯೬೦೨೨೬೪೫ ಸಂಪರ್ಕಿಸ ಬಹುದಾಗಿದೆ. ಕರ್ನಾಟಕ ಬ್ಯಾಂಕ್ ಖಾತೆ ನಂ:3422500101157301 i.f.sc.KARB0000342 ಅರ್ಥಿಕವಾಗಿ ಸಹಾಯ ಮಾಡ¨ಹುದು.
ಬಾಕ್ಸ:
ನಾನು ಹುಬ್ಬಳ್ಳಿಯ ಜೋರ್‌ದಾರ್ ಕ್ರಿಕೆಟ್ ಸಂಸ್ಥೆಯ ಮೂಲಕ ಹಲವಾರು ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದು, ಈಗ ರಾಷ್ಟ್ರಮಟ್ಟಕ್ಕೆ ಆಯ್ಕೆ ಯಾಗಿದ್ದು, ನನಗೆ ಈಗ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಲು ಆರ್ಥಿಕ ನೆರವು ಬೇಕಾಗಿದೆ.
ನವೀನ್ ಕ್ರಿಕೆಟ್ ಆಟಗಾರ. ಮಿರಾಕೊರನಹಳ್ಳಿ.
ನಮ್ಮ ತಾಲೂಕಿನ ಗ್ರಾಮೀಣ ಪ್ರತಿಭೆ ಬೆಳೆಯಲು ನಾನು ನಮ್ಮ ಟ್ರಸ್ಟ್ ವತಿಯಿಂದ ಆರ್ಥಿಕವಾಗಿ ಸಹಾಯವನ್ನು ನೀಡುತ್ತೇನೆ. ನಾಡಿನ ಕ್ರೀಡಾ ಪ್ರೇಮಿಗಳು ಈತನ ನೆರವಿಗೆ ಬರಬೇಕಿದೆ.
ಎ.ಎಂಪಿ. ವಾಗೀಶ್. ಸಮಾಜ ಸೇವಕರು. ಹೊಳಗುಂದಿ