126 total views
ಆಯನೂರಿನ: ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಅಗಸ್ತ್ಯ ಅಂತರ ರಾಷ್ಟ್ರೀಯ ಪ್ರತಿಷ್ಠಾನ ಇವರ ಸಹಯೋಗದಲ್ಲಿ 5 ರಿಂದ 10 ನೇ ತರಗತಿಯ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರವನ್ನು ಆಯನೂರಿನ ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಶಿಬಿರವು ಭಾನುವಾರ ಹೊರತು ಪಡಿಸಿ ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1-30 ರ ವರೆಗೆ ನಡೆಯುತ್ತದೆ ಹಾಗೂ ಶಿಬಿರವು ಬೆಳಿಗ್ಗೆ ಪ್ರಾರ್ಥನೆಯೊಂದಿಗೆ ಆರಂಭವಾಗಿ, ವಿಜ್ಞಾನ ಮತ್ತು ಗಣಿತ ಪಠ್ಯಾಧಾರಿತ ಪ್ರಾಯೋಗಿಕ ಚಟುವಟಿಕೆಗಳೊಂದಿಗೆ ಬೋಧನೆ ಯೋಜನಾಧಾರಿತ ಕಲಿಕೆ, ಚಿತ್ರಕಲೆ, ಸಂಗೀತ, ನೃತ್ಯ, ಕ್ರೀಡೆ, ಮೌಲ್ಯ ಶಿಕ್ಷಣದ ಜೊತೆಗೆ ವಿವಿಧ ಸ್ಪರ್ಧೆಗಳು ಇರುತ್ತವೆ, ಗಣಕಯಂತ್ರ,ಇನ್ನೋವೇಷನ್ ಹಬ್, ರೋಬೋಟಿಕ್, ಎಲೆಕ್ಟ್ರಾನಿಕ್ ಪ್ರೋಗ್ರಾಮಿಂಗ್ ಗಳನ್ನು ಟ್ಯಾಬ್ ಮೂಲಕ ವಿಶೇಷ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತದೆ.
ಶಿಬಿರವು ಬರುವ ಏಪ್ರಿಲ್ 11 ರಿಂದ ಮೇ 12 ರವರೆಗೆ ನಡೆಯಲಿದ್ದು, ಆಸಕ್ತ ವಿಧ್ಯಾರ್ಥಿಗಳು ಭಾಗವಹಿಸಲು ಕೋರಲಾಗಿದೆ.
ಹೆಚ್ಚಿನ ವಿವರಗಳಿಗೆ ಕೇಂದ್ರದ ಮುಖ್ಯಸ್ಥರಾದ ಅನೀಲ ಹಜೇರಿಯವರನ್ನು ಸಂಪರ್ಕಿಸಲು ಕೋರಿದ್ದಾರೆ, ಮೊ.ಸಂ 9901828469, 7795251358, 8618988433, 9740602852
ವರದಿ: M.H.ರಾಘವೇಂದ್ರ ಸಂಪೋಡಿ