ಕೊಟ್ಟೂರು: ಪಟ್ಟಣದ ಪ್ರತಿಷ್ಠಿತ ಇಂದು ಪ.ಪೂ. ಕಾಲೇಜ್ ನ ಅಂಗ ಸಂಸ್ಥೆ “ವೀರಭದ್ರೇಶ್ವರ ಶಿಕ್ಷಣ ಸಂಸ್ಥೆ” ಆಡಳಿತಕ್ಕೆ ಧಾರವಾಡ ಹೈಕೋರ್ಟ ಒಂದು ಲಕ್ಷ ರೂ. ದಂಡ ವಿಧಿಸಿ ಛೀಮಾರಿ ಹಾಕಿ ಮಹತ್ವದ ತೀರ್ಪು ಪ್ರಕಟಿಸಿದೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಈ ಪ್ರಕರಣದ ಹೆಚ್ಚುವರಿ ಪ್ರತಿವಾಧಿ ಡಾ. ಪ್ರದೀಪ್ ಭೂಸನೂರು ಮಠ, ಢಾರವಾಡ ಹೈಕೋರ್ಟನ ನ್ಯಾಯಾಧೀಶ ಸೂರಜ್ ಗೋವಿಂದರಾಜ್ ನೀಡಿರುವ ತೀರ್ಪಿನ ಪ್ರತಿಗಳನ್ನು ಪತ್ರಕರ್ತರಿಗೆ ವಿತರಿಸಿ ಮಾತನಾಡಿದರು.
ಇಂದು ಕಾಲೇಜ್ ಆಡಳಿತ ಹಡಗಲಿ ತಾಲೂಕು ಇಟಗಿಯಲ್ಲಿ ಪ.ಪೂ ಶಿಕ್ಷಣ ಇಲಾಖೆ ಪರವಾನಗಿ ಇಲ್ಲದೆ ಇಂದು ಹೆಸರಿನಲ್ಲಿ ಕಾಲೇಜ್ ಆರಂಭಿಸಿ, ಪ್ರಥಮ ಪಿಯುಸಿ 55, ದ್ವಿತೀಯ ಪಿಯುಸಿ 67 ವಿದ್ಯಾರ್ಥಿಗಳ ಪ್ರವೇಶ ಮಾಡಿಕೊಂಡು ಕಾಲೇಜ್ ನಡೆಸುತ್ತಿತ್ತು.
ಈ ಕುರಿತು ಡಾ. ಪ್ರದೀಪ್ ಭೂಸನೂರು, ಪ.ಪೂ. ಶಿಕ್ಷಣ ಇಲಾಖೆಗೆ ದೂರು ನೀಡಿದಾಗ, ಇಲಾಖೆ ಡಿಡಿಪಿಯು ರಾಜು, ತನಿಖೆ ಮಾಡಿ, ಶಿಕ್ಷಣ ಇಲಾಖೆಯಿಂದ ಪರವಾನಗಿ ಪಡೆದೇ ಇರುವುದು ಕುರಿತು ಬೆಂಗಳೂರು ಪಿಯು ಶಿಕ್ಷಣ ಇಲಾಖೆಗೆ ವರದಿ ಸಲ್ಲಿಸಿದರು.
ಇನ್ನೂ ಅನೇಕ ಇಂದು ಕಾಲೇಜ್ ಆಡಳಿತ ನ್ಯೂನತೆ, ಶಿಕ್ಷಣ ಇಲಾಖೆಗೆ ವಂಚನೆ, ವಿದ್ಯಾರ್ಥಿಗಳ ಪೋಷಕರಿಗೆ ತಪ್ಪು ಮಾಹಿತಿ ನೀಡಿದ್ದರ ವಿರುದ್ದವೂ ಡಾ. ಪ್ರದೀಪ ಭೂಸನೂರು ಮಠ ಲಖಿತ ದೂರು ನೀಡಿ ಸಮಗ್ರ ತನಿಖೆ ನಡೆಸುವಂತೆ ಕೋರಿದ್ದರು.
ಶಿಕ್ಷಣ ಇಲಾಖೆಯಿಂದ ಉನ್ನತ ಮಟ್ಟದ ಅಧಿಕಾರಿಗಳಿಂದ ಇಂದು ಕಾಲೇಜ್ ಆಡಳಿತ ವಿರುದ್ದ ತನಿಖೆ ನಡೆದರೆ, ದೊಡ್ಡ ಮಟ್ಟದಲ್ಲಿ ವಂಚನೆ, ಭ್ರಷ್ಟತೆ ಹೊರಬಿದ್ದು, ಕಾಲೇಜ್‌ನ ಪ್ರತಿಷ್ಠಿತೆ ಮಣ್ಣುಪಾಲಾಗುತ್ತದೆ ಎಂದು ಇಂದು ಕಾಲೇಜ್ ಆಡಳಿತ ಈ ತನಿಖೆಯನ್ನು ಕೈಬಿಡುವಂತೆ ಧಾರವಾಡ ಹೈಕೋರ್ಟ ಮೆಟ್ಟಲೇರಿತ್ತು.
ಧಾರವಾಡ ಹೈಕೋರ್ಟ ಎರಡು ಕಡೆವಾದ ಆಲಿಸಿ, ಇಂದು ಕಾಲೇಜ್ ಆಡಳಿತದ ನ್ಯೂನತೆ, ಶಿಕ್ಷಣ ಇಲಾಖೆಗೆ ವಂಚನೆ, ಪೋಷಕರಿಗೆ ತಪ್ಪು ಮಾಹಿತಿ ನೀಡಿರುವುದು ಸಾಭೀತು ಆದ ಕಾರಣ ಒಂದು ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ಕೋರ್ಟ ಆದೇಶ ಹೊರಬಿದ್ದ 24 ತಾಸಿನೊಳಗೆ ಈ ಪಂಚಮಸಾಲಿ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳನ್ನು ಸಮೀಪದ ಸರ್ಕಾರಿ ಜೂನಿಯರ್ ಕಾಲೇಜ್‌ಗೆ ಸೇರಿಸಿ, ಈ ಎಲ್ಲಾ ವಿದ್ಯಾರ್ಥಿಗಳ ಪ್ರವೇಶ, ಅವರ ಪೋನ್ ನಂಬರ್‌ಗಳನ್ನು ರಾಜ್ಯ ಶಿಕ್ಷಣ ಇಲಾಖೆಗೆ ರವಾನಿಸುವಂತೆ ಕೋರ್ಟ ಪಿಯು ಶಿಕ್ಷಣ ಇಲಾಖೆಗೆ ಸೂಚಿಸಿದೆ,
ಆದರೆ ಈ ಕಾರ್ಯ ಬಳ್ಳಾರಿ ಡಿಡಿಪಿಯು ಯಿಂದ ನಡೆಯುತ್ತಿಲ್ಲ, ಕಾರಣ ತಿಳಿಯದು, ಕೋರ್ಟ್ ಆದೇಶದಂತೆ ವಿದ್ಯಾರ್ಥಿಗಳನ್ನು ಸಮೀಪದ ಸರ್ಕಾರಿ ಕಾಲೇಜಿಗೆ ಸೇರಿಸದಿದ್ದರೆ ವಿದ್ಯಾರ್ಥಿಗಳು ಪಿಯುಸಿ ನಂತರ ಉನ್ನತ ವ್ಯಾಸಂಗಕ್ಕೆ ಅಥವಾ ಉದ್ಯೋಗಕ್ಕೆ ಹೋದ ಸಂದರ್ಭದಲ್ಲಿ ಸಮಸ್ಯೆ ಉದ್ಭವ ಆಗುವುದರಲ್ಲಿ ಎರಡು ಮಾತಿಲ್ಲ ಈ ಬಗ್ಗೆ ಇಲಾಖೆ ಮತ್ತು ಪೋಷಕರು ಎಚ್ಚೆತ್ತುಕೊಳಬೇಕಾಗಿದೆ ಎಂದು ಹೇಳಿದರು.
ಶಿಕ್ಷಣ ಇಲಾಖೆಗೆ ತಪ್ಪುಮಾಹಿತಿ ನೀಡಿ ವಂಚಿಸಿರುವ ಇಂದು ಪ.ಪೂ. ಕಾಲೇಜ್ ಆಡಳಿತ ನಡೆಸುತ್ತಿರುವ ಕಾಲೇಜ್‌ಗಳ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸಿ 6೦ ದಿನಗಳ ಒಳಗಾಗಿ ಕೋರ್ಟಗೆ ಪಾರದರ್ಶಕ ವರದಿ ನೀಡುವಂತೆ ಆದೇಶಿ ಸೂಚನೆ ನೀಡಿದೆ.
ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸುಳ್ಳುಮಾಹಿತಿ ನೀಡಿ ವಂಚಿಸಿರುವ ಇಂದು ಪ.ಪೂ. ಕಾಲೇಜ್ ಆಡಳಿತ ಮಂಡಳಿ ವಿರುದ್ದ ಯಾವುದೇ ಸಮಯದಲ್ಲಿ ವಂಚನೆ ಪ್ರಕರಣವನ್ನು ಪೊಲೀಸ್ ಠಾಣೆಯಲ್ಲಿ ದಾಖಲಿಸಬಹುದೆಂದು ಕೋರ್ಟ ತಿಳಿಸಿದೆ.
ಪ್ರತಿ ವರ್ಷ ಇಂದು ಕಾಲೇಜ್ ರ‍್ಯಾಂಕ್ ಪಡೆಯುವುದರ ಬಗ್ಗೆ ಸಂಶಯಿಸಿದ ಡಾ. ಪ್ರದೀಪ ಭೂಸನೂರು, ಆನ್ ಲೈನ್‌ನಲ್ಲಿರುವ ಇಂದು ಕಾಲೇಜ್ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ಯಾರು ಬೇಕಾದರೂ ಗಮನಿಸಬಹುದು ಎಂದರು.
ಇಟಿಗಿ, ಪಂಚಮಸಾಲಿ ಪ.ಪೂ ಕಾಲೇಜ್ ಮತ್ತು ಇಂದು ಪದವಿ ಕಾಲೇಜ್ ಕೊಟ್ಟೂರು ಎರಡು ಕಾಲೇಜಿಗೆ ಒಬ್ಬರೇ ಪಿ.ಎಂ ವಾಗೀಶಯ್ಯ ಎನ್ನುವವರು ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಈ ಸಂಬಂಧ ಇಲಾಖೆಗೆ ತಿಳಿಸುವ ಮೂಲಕ, ಕೋರ್ಟ್ ಮೆಟ್ಟೆಲೇರುವುದಾಗಿ ಮತ್ತು ಇಂದು ಕಾಲೇಜ್ ಆಡಳಿತ ಮಂಡಳಿಯ ಸಂಪೂರ್ಣ ವಂಚನೆ ಬಯಲಿಗೆ ಬರುವ ತನಕವೂ ಹೋರಾಟ ಮುಂದುವರಿಸುತ್ತೇನೆ ಎಂದರು.
ವರದಿ: ಶಿವರಾಜ್ ಕನ್ನಡಿಗ