ಗಂಗಾವತಿ: ನಗರದ ಪೂರ್ಣಿಮಾ ಹಾಗೂ ಚಂದ್ರಹಾಸ ಚಿತ್ರಮಂದಿರಗಳಲ್ಲಿ ಇಂದು ದಿನಾಂಕ: ೨೫.೦೩.೨೦೨೨ ರ ಬೆಳಗಿನ ಜಾವ ೩ ಗಂಟೆಯಿOದ ಆರ್.ಆರ್.ಆರ್. ತೆಲುಗು ಸಿನಿಮಾ ರಿಲೀಸ್ ಪ್ರದರ್ಶನಗೊಳ್ಳುತ್ತಿದ್ದು, ಆದರೆ ಚಿತ್ರಮಂದಿರಗಳು ಟಿಕೆಟ್ ದರವನ್ನು ಒಮ್ಮಿಂದೊಮ್ಮೆಲೆ ಹೆಚ್ಚಿಗೆ ಮಾಡಿ, ಮನಬಂದAತೆ ಬೆಲೆ ಏರಿಕೆ ಮಾಡಿದ್ದಾರೆ. ನಿನ್ನೆಯವರೆಗೂ ಪ್ರತಿ ಟಿಕೆಟ್‌ಗೆ ಬಾಲ್ಕನಿಗೆ-೧೫೦, ಫಸ್ಟ್ ಕ್ಲಾಸ್‌ಗೆ-೧೨೦ ಎಂದು ನಿಗದಿಪಡಿದ್ದರು. ಆದರೆ ಇಂದು ಆರ್.ಆರ್.ಆರ್. ತೆಲುಗು ಸಿನಿಮಾ ಪ್ರದರ್ಶನಕ್ಕೆ ಒಮ್ಮಿಂದೊಮ್ಮೆಲೆ ಬಾಲ್ಕನಿ, ಫಸ್ಟ್ಕ್ಲಾಸ್ ಎರಡನ್ನೂ ಒಂದು ಮಾಡಿ ಪ್ರತಿ ಟಿಕೆಟ್‌ಗೆ ರೂ. ೨೫೦/- ರಿಂದ ೫೦೦/- ರವರೆಗೆ ವಸೂಲಿ ಮಾಡುತ್ತಿದ್ದಾರೆ. ಶ್ರೀಮಂತರು ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡುವುದಿಲ್ಲ. ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡುವುದು ಮದ್ಯಮ ವರ್ಗದ ಹಾಗೂ ಬಡವರ್ಗದ ಸಾರ್ವಜನಿಕರು ಆಗಿರುತ್ತಾರೆ. ಆದ್ದರಿಂದ ಮಧ್ಯಮ ಹಾಗೂ ಬಡವರ್ಗದ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಲು ಮುಂದಾಗಿರುವುದು ತೀವ್ರ ಖಂಡನೀಯವಾಗಿದೆ. ಮದ್ಯಮ ಹಾಗೂ ಬಡವರ್ಗದವರನ್ನು ಆರ್ಥಿಕ ತೊಂದರೆಗೆ ಒಳಪಡಿಸುತ್ತಿರುವುದು ಅಮಾನವೀಯ ಕೃತ್ಯವಾಗಿದೆ ಎಂದು ಕನ್ನಡಪರ ಸಂಘಟನೆಗಳ ಮುಖಂಡರಾದ ಪಂಪಣ್ಣ ನಾಯಕ ಪ್ರಕಟಣೆಯಲ್ಲಿ ತಿಳಿಸಿದರು.
ಅವರು ಈ ವಿಷಯವಾಗಿ ದೂರು ಪತ್ರವನ್ನು ಇಂದು ತಹಶೀಲ್ದಾರರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡುತ್ತಿದ್ದರು. ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಸಂಬOಧಪಟ್ಟ ಇಲಾಖೆಯ ಅಧಿಕಾರಿಗಳು ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟ ಮಾಡುತ್ತಿರುವ ಗಂಗಾವತಿಯ ಪೂರ್ಣಿಮಾ ಹಾಗೂ ಚಂದ್ರಹಾಸ ಚಿತ್ರಮಂದಿರಗಳ ಮಾಲಿಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ನಿಗದಿತ ಮನೋರಂಜನಾ ತೆರಿಗೆಯೊಂದಿಗೆ ಬೆಲೆ ನಿಗದಿಪಡಿಸಲು ತಾವು ಚಿತ್ರಮಂದಿರಗಳಿಗೆ ಸೂಚನೆ ನೀಡಬೇಕು. ಒಂದು ವೇಳೆ ನಿರ್ಲಕ್ಷಿಸಿದಲ್ಲಿ ಚಿತ್ರಮಂದಿರಗಳ ಮುಂದೆ ಹಾಗೂ ಸಂಬAಧಪಟ್ಟ ಇಲಾಖೆ ಕಛೇರಿಗಳ ಮುಂದೆ ಪ್ರತಿಭಟನೆ ನಡೆಸುತ್ತಿವೆಂದು ಎಚ್ಚರಿಕೆ ನೀಡಿದರು.