172 total views
ಮೇಲುಕೋಟೆ: ಈ ವರ್ಷ ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಶಶಿಕಲಾ ರಂಗಾಯಣ ಅಭಿನಯಿಸಿರುವ ಏಕವ್ಯಕ್ತಿ ರಂಗಪ್ರಸ್ತುತಿ “ಕಸ್ತೂರಬಾ” ಎಂಬ ವಿಶೇಷ ನಾಟಕ ಪ್ರದರ್ಶನವನ್ನು ಜನಪದ ಸೇವಾ ಟ್ರಸ್ಟ್, ಮೇಲುಕೋಟೆ ಹಾಗೂ ಪು.ತಿ.ನ ಟ್ರಸ್ಟ್ ಮೇಲುಕೋಟೆ ಇವರ ಸಹಯೋಗದಿಂದ ಮಾರ್ಚ್ 26ರಂದು ಮೇಲುಕೋಟೆಯ ಪು.ತಿ.ನ ಮಂದಿರದಲ್ಲಿ ಎ.ರಾಮನಾಥ್ ರಚನೆಯ “ಕಸ್ತೂರಬಾ” ಎಂಬ ವಿಶೇಷ ನಾಟಕವನ್ನು ಪ್ರದರ್ಶಿಸುತ್ತಿದ್ದಾರೆ. ಈ ನಾಟಕದ ನಿರ್ದೇಶಕರು ಖ್ಯಾತ ರಂಗಕರ್ಮಿಗಳಾದ ಶಶಿಧರ್ ಭಾರಿಘಾಟ್, ಸಂಗೀತ ನಿರ್ದೇಶಕರು ಭೂಷಣ್ ಭಟ್ ಭೂಪಾಲ್. ರಂಗ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ನಾಟಕ ಪ್ರದರ್ಶನವನ್ನು ಯಶಸ್ವಿಗೊಳಿಸಬೇಕೆಂದು ಮೇಲುಕೋಟೆ ಜನಪದ ಸೇವಾ ಟ್ರಸ್ಟ್ ನ ಸಂತೋಷ್ ಕೌಲಗಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.