ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಇವಣಗಿ ಗ್ರಾಮ ತನ್ನದೇ ಆದ ಹಿರಿಮೆ ಹೊಂದಿದೆ. ಇಲ್ಲಿನ ಹಿರಿಯ ಕಲಾವಿದರಾದ ಶ್ರೀ ಶಿವಬಸಯ್ಯ ಬ ಹಿರೇಮಠ ಅವರು ಬಸವಣ್ಣನ ಪಾತ್ರಧಾರಿಯಾಗಿ ರಂಗದ ಮೇಲೆ
ನಿಂತು “ತಂದೆ ನೀನು ತಾಯಿ ನೀನು” ಎಂಬ ವಚನ ಹಾಡುತ್ತಿದ್ದರೆ ಸಾಕ್ಷಾತ್ ಬಸವಣನವರೇ ಕಣ್ಣೆದುರಿಗೆ ಬಂದ ಅನುಭವ. ಒಂದೊಂದು ಸಂಭಾಷಣೆ ಕೇಳಿದರೆ ರೋಮಾಂಚನ ಮತ್ತು ಎಲ್ಲೆಲ್ಲೂ ಭಕ್ತಿಯ ಭಾವ ಹೊಮ್ಮುತ್ತದೆ.ಪಾತ್ರಕ್ಕೆ ನ್ಯಾಯ ಸಲ್ಲಿಸಿದ ಶಿವಯ್ಯನವರು ಊರಿನಲ್ಲಿ ಧಾರ್ಮಿಕ,ಸಾಮಾಜಿಕ ಮತ್ತು ಸಂಸ್ಕ್ರುತಿಕವಾಗಿ ಮಿಡಿಯುವರು.
ಕೃಷಿಕಾಯಕ ನಂಬಿ ಬಸವ ಪಥದಲ್ಲಿ ಹೊರಟವರು.
ಇಂದಿನ ಅನೇಕ ಯುವಕರಿಗೆ ಉದ್ಯೋಗದ ಬೆಳಕು ನೀಡಿದ ಕರುಣಾಮಯಿಗಳು. ಪ್ರಚಾರದಿಂದ ದೂರವಿದ್ದು ಕಲಾ ಕಾಯಕ ಮಾಡುತ್ತಿರುವ ಸರಳರು.”ಮಾಡಿದೆ ನೆಂಬುದು ಮನದಲಿ ಹೊಳೆದರೆ ಏಡಿಸಿ ಕಾಡಿತ್ತು ಶಿವನ ಡಂಗುರ” ಎಂಬುದನ್ನು ಉಚ್ಚರಿಸಿ, ಪ್ರತಿಕ್ಷಣ ತಮ್ಮೊಳಗೇ ತಾವೇ ಎಚ್ಚರಿಸಿಕೊಳ್ಳುವ ಶಿವಯ್ಯನವರು ಸಮಾಜಕ್ಕೆ ಮಾದರಿ. ಇಂಥಹ ಪೂಜ್ಯವಂತರು 25 ವರ್ಷಗಳ ಹಿಂದೆ ಕಟ್ಟಿದ ನಾಟ್ಯ ಸಂಘದ ಇತಿಹಾಸ ರೋಚಕವಾಗಿದೆ.
1997 ರಲ್ಲಿ ಇವರ ಅಧ್ಯಕ್ಷತೆಯಲ್ಲಿ “ಬಸವ ಚೇತನ ನಾಟ್ಯ ಕಲಾ ಸಂಘ ,ಇವಣಗಿ ಅಸ್ತಿತ್ವಕ್ಕೆ ಬರುತ್ತದೆ.ಉಪಾಧ್ಯಕ್ಷರಾಗಿ ಶ್ರೀ ಲಕ್ಷಣಗೌಡ ಪಾಟೀಲ ,ಕಾರ್ಯದರ್ಶಿಗಳಾಗಿ ಶ್ರೀ ಬಸವಂತಪ್ಪ ಬಿದರಕುಂದಿ,ಸದಸ್ಯರಾಗಿ ಶ್ರೀ ಶಿವಮಾನ್ಯಪ್ಪ ಚಕ್ರಮನಿ,ಶ್ರೀ ಬಸವರಾಜ್ ಬಿದರಕುಂದಿ,ಶ್ರೀ ಬಾಪೂರಾಯ ಚಕ್ರಮನಿ, ದಿ|| ಧರ್ಮಣ್ಣ ಮನಗೂಳಿ, ಶ್ರೀ ನಿಂಗಪ್ಪ ಕಟಗೇರಿ,ಶ್ರೀ ಮಾನಪ್ಪ ಬಡಿಗೇರ.ಶ್ರೀ ದಾದಾಫಿರ್ ಮುಲ್ಲಾ ,ಶ್ರೀ ಪರಶುರಾಮ ಬಬಲೇಶ್ವರ್, ಶ್ರೀ ಸಂಗಪ್ಪ ಕಣಕಾಲ,ಶ್ರೀ ಕಾಳಪ್ಪ ಬಡಿಗೇರ,ಶ್ರೀ ಮಾಂತೇಶ್ ಹುಣಸ್ಯಾಳ ಶ್ರೀ ಬಸಪ್ಪ ರಾಗಪ್ಪಗೋಳ, ಶ್ರೀ ಭೀಮರಾಯ ತಿಳಗೋಳ ಅವರು ಕಲಾವಿದರಾಗಿ ಸೇವೆ ಗೈದಿದ್ದಾರೆ.
ಊರಲ್ಲಿ ನಾಟಕ ಪ್ರದರ್ಶನಕ್ಕೆಂದು ಕಲಿತು ಅಭಿನಯಿಸಿದ ನಾಟಕ ಇದುವರೆಗೆ ಸುಮಾರು 400 ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ ಎಂದರೆ ನೀವು ನಂಬಲೇಬೇಕು.ಲಾಭದ ಉದ್ದೇಶ ಲವಲೇಶವೂ ಇಲ್ಲದ ಈ ಸಂಸ್ಥೆ ಬಸವತತ್ವ ಪ್ರಚಾರಕ್ಕೆ ಮಾನ್ಯತೆ ಕೊಟ್ಟು ,ಕಲೆ ಉಳಿಸುವುದರ ಜೊತೆಗೆ ಪರೋಕ್ಷವಾಗಿ ಸಮಾಜದ ಅನಿಷ್ಠವನ್ನು ತೊಳೆದು ಸು-ಜ್ಞಾನವನ್ನು ಮೂಡಿಸುತ್ತಿದೆ.ನಾಟಕ ಮುಗಿಯುದರೊಳಗಾಗಿ ಸುಮಾರು 200 ವಿವಿಧ ಶರಣರ ವಚನಗಳು ಸಂದರ್ಭನುಸಾರ ಬಂದು ಹೋಗುತ್ತವೆ. ಇವೆಲ್ಲವುಗಳನ್ನು ಕೇಳುವುದೇ ಒಂದು ಮಹದಾನಂದ.
ಸದ್ಯ ಪಿಎಚ್ ಡಿ ಮಾಡುತ್ತಿರುವ ಬಸವರಾಜ ಹಡಪದ ಅವರು ಪದವಿ ಓದುವಾಗ ಶಿವಬಸಯ್ಯನವರ ಸಂದರ್ಶನ ಮಾಡಿದ್ದು, ಫೋಟೋ ಸಂಗ್ರಹಿಸಿದ್ದು, ಪುಸ್ತಕ ರೂಪದಲ್ಲಿ ಹೊರತರುತ್ತಿರುವುದು ಸ್ಲಾಘನೀಯ.
ಪಾತ್ರಧಾರಿಗಳು
ಬಸವಣ್ಣ:-ಶ್ರೀ ಶಿವಬಸಯ್ಯ ಬ ಹಿರೇಮಠ.
ಅಲ್ಲಮಪ್ರಭು/ಜಾತವೇದ ಮುನಿಗಳು:-ಶ್ರೀ ಬಸವರಾಜ್ ಬಿದರಕುಂದಿ(ಶಿಕ್ಷಕರು)
ನೀಲಾಂಬಿಕೆ:- ರಾಜೇಶ್ವರಿ ಬಿಜಾಪೂರ
ಗಂಗಾಂಬಿಕೆ:- ಶಿವಮಾನ್ಯಪ್ಪ ಚಕ್ರಮನಿ
ಶ್ರೀ ಹರಳಯ್ಯ :- ಬಸವಂತಪ್ಪ ಬಿದರಕುಂದಿ
ಬಿಜ್ಜಳ :-ಶ್ರೀ ಬಾಪೂರಾಯ ಚಕ್ರಮನಿ.
ಕೊಂಡಿ ಮಿಂಚಣ್ಣ:-ಶ್ರೀ ಲಕ್ಷಣಗೌಡ ಪಾಟೀಲ
ಕೇರಿಯ ಗಂಗವ್ವ ಮತ್ತು
ಅಕ್ಕಮಹಾದೇವಿ:-ದಾದಾಫಿರ್ ಮುಲ್ಲಾ
ಕಲ್ಯಾಣಮ್ಮ :- ಬಸಪ್ಪ ಶಿ ರಾಗಪ್ಪಗೋಳ
ಹಡಪದ ಅಪ್ಪಣ್ಣ ಮತ್ತು ಬಲದೇವ :- ನಿಂಗಪ್ಪ ಕಟಗೇರಿ
ಪೆದ್ದರಸ :- ವಿಠಲ ಜಂಬಗಿ ಮತ್ತು ಶಿವಪ್ಪ ಮನಹಳ್ಳಿ
ಕಲ್ಯಾಣ ಶೆಟ್ಟರು :- ಮಾನಪ್ಪ ಬಡಿಗೇರ ,ಸಂಗಪ್ಪ ಕಣಕಾಲ, ಲಾಯಪ್ಪ ಪೂಜಾರಿ
ಮಡಿವಾಳ ಮಾಚಿದೇವ :- ದಿ //ಕೆ ಭೀಮರಾವ್ (ತಿಳಗೋಳ ) ,ನಾಗು ಲ ಬಿರಾದಾರ.
ಸಿದ್ರಾಮೇಶ್ವರ :- ಮಲ್ಲಯ್ಯ ಚಿಕ್ಕಮಠ.
ಮಾದಿಗರ ಭೀಮ :- ಪರಸಪ್ಪ ಬ ಬಬಲೇಶ್ವರ್(ನಾಗೂರ)
ದಿ|| ರಾಚಪ್ಪಮಾಸ್ತರ್ ಆಲಗೂರ(ಮೂಲ ನಾಟಕ ನಿರ್ದೇಶಕರು ಮತ್ತು ವಚನಗಳಿಗೆ ರಾಗ ಸಂಯೋಜಕರು ಹಾಗೂ ಶ್ರೇಷ್ಠ ಗೀಟಾರ ವಾದಕರು)
ಹಾರ್ಮೋನಿಯಂ :- ಶ್ರೀ ಕಾಳಪ್ಪ ಮಾಸ್ತರ್ ಬಡಿಗೇರ
ತಬಲಾ:-ಮಾಂತೇಶ್ ಹುಣಸ್ಯಾಳ.
ಹೀಗೆ ಈ ತಂಡವನ್ನು ಕಟ್ಟಿಕೊಂಡು ಈಗಲೂ ಕರ್ನಾಟಕ ಸುತ್ತಿತ್ತಿರುವ ಶ್ರೀಯುತರ ಹಿರಿಯ ಸಾಧನೆ ಗುರುತಿಸಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಇವರನ್ನು ಸಾಧಕರ ಸ್ಥಾನದಲ್ಲಿ ಕುಳ್ಳಿಸಿರಿ, 23.3.2022 ರಂದು ಬಸವನಬಾಗೇವಾಡಿಯ ವಿರಕ್ತಮಠದ ಶ್ರೀ ಮ ನಿ ಪ್ರ ಸಿದ್ದಲಿಂಗ ಮಹಾಸ್ವಾಮಿಗಳ ಸಮ್ಮುಖದಲ್ಲಿ ಸನ್ಮಾನಿಸುತ್ತಿರುವುದನ್ನು ಕಲಾ ಲೋಕದ ಹೃನ್ಮನಗಳ ಮುಂದೆ ಹೇಳಲು ಸಂತಸವೆನಿಸುತ್ತಿದೆ.
ವರದಿ: ಮುತ್ತು ದೇವನಪ್ಪಗೊಳ