ಗಂಗಾವತಿ: ಭತ್ತದ ಕಣಜ ಗಂಗಾವತಿ ನಗರದ ಪ್ರಸನ್ನ ಶ್ರೀ ಪಂಪಾ ವಿರುಪಾಕ್ಷೇಶ್ವರ ಜಾತ್ರೆಯ ಮಹೋತ್ಸವದ ಅಂಗವಾಗಿ ಹಿರೇಜಂತಕಲ್ ಪ್ರಿಮಿಯರ್ ಲೀಗ್ HPL-2 ಪಂದ್ಯಾವಳಿಯನ್ನು ಸಂವಿಧಾನ ಶಿಲ್ಪಿ “ಡಾ! ಬಿ,ಆರ್. ಅಂಬೇಡ್ಕರ್” ರವರ ಮತ್ತು ಕರ್ನಾಟಕದ ಕಣ್ಮಣಿ “ಪುನೀತ್ ರಾಜಕುಮಾರ್” ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಕ್ರಿಕೆಟ್ ಪಂದ್ಯಾವಳಿಯನ್ನು ನಗರಸಭೆ ಸದಸ್ಯರಾದ ಶ್ರೀಮತಿ “ಹುಲಿಗೆಮ್ಮ ಕಿರಿಕಿರಿ” ಉದ್ಘಾಟನೆ ಮಾಡಿದರು.
ಕ್ರೀಡಾಪಟುಗಳಿಗೆ 90 ಟಿ-ಶರ್ಟ್ ವಿತರಿಸುವ ಮೂಲಕ ಕ್ರಿಕೆಟ್ ಸ್ಪೂರ್ತಿಯನ್ನು ಮೆರೆದರು. ಆಟದಲ್ಲಿ ಗೆಲ್ಲೋದು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ ಎಂದು ಕ್ರೀಡಾಪಟುಗಳಿಗೆ ಹುಮ್ಮಸ್ಸು ತುಂಬಿದರು.
ಈ ಸಂದರ್ಭದಲ್ಲಿ ರಾಮು ಕಿರಿಕಿರಿ ಕಾಂಗ್ರೆಸ್ ಯುವ ಮುಖಂಡರು, ಕ್ರಿಕೆಟ್ ಟೀಮ್‌ನ ಆಯೋಜಕರು ಮತ್ತು ಕ್ರಿಕೆಟ್ ಆಟಗಾರರು ವಾರ್ಡಿನ ಗುರು-ಹಿರಿಯರು ಉಪಸ್ಥಿತರಿದ್ದರು.