144 total views
ಕವಿತಾಳ: ತೊಟ್ಟ ಬಟ್ಟೆ ಮಡಿ ಮಾಡಿದ್ದಲ್ಲದೆ, ಅಂತರಂಗವನ್ನು ಶುದ್ಧ ಮಾಡಿದರು ಮಡಿವಾಳ ಮಾಚಿದೇವ ಎಂದು ರಮೇಶ ಮಡಿವಾಳರ ಯುವ ಮಾಚಿದೇವ ಯುವ ಸಮಿತಿ ಅಧ್ಯಕ್ಷರು ಬಣ್ಣಿಸಿದರು. ಕವಿತಾಳ ಪಟ್ಟಣ ಪಂಚಾಯತಿಯಲ್ಲಿ ಆಯೋಜಿಸಿದ್ದ 841 ನೇ ಮಡಿವಾಳ ಮಾಚಿದೇವ ಜಯಂತಿಯಲ್ಲಿ ಮಾಲಾರ್ಪಣೆ ಮಾಡಿ ಮಾತನಾಡಿದ ಯುವ ಮಾಚಿದೇವ ಸಮಿತಿ ಅಧ್ಯಕ್ಷರು ರಮೇಶ ಮಡಿವಾಳರ ಹಾಗೂ ಯುಗವನ್ನೇ ಹೋಗೆದಾತ, ಯುಗವನ್ನೇ ಮಡಿ ಮಾಡಿದಾತ, ಜಗಕ್ಕೇ ಬೆಳಕು ನೀಡಿದಾತ, ಎಲ್ಲರ ಅಂತರಂಗವನ್ನು ಶುದ್ಧ ಮಾಡಿದಾತ, ಮಾಚಿದೇವ ಎಂದು ವರ್ಣಿಸಿದರು. ಹಾಗೂ 12 ನ್ನೇ ಶತಮಾನದಲ್ಲಿ ಜ್ಞಾನ ಪಥವನ್ನು ಅರ್ಥೈಸಿಕೊಂಡು ಮಾಚಿದೇವ ಸಮಾರು 500 ವಚನಗಳು ರಚಿಸಿದ್ದು, ಅದರಲ್ಲಿ ಸರಕಾರ 350 ವಚನಗಳು ಸಂಗ್ರಹಿಸಿದೆ ಈ ಸಮಾರಂಭದಲ್ಲಿ ರಮೇಶ ಮಡಿವಾಳರ ಅಧ್ಯಕ್ಷರು ಮಾಚಿದೇವ ಯುವ ಸಮಿತಿ ಕವಿತಾಳ. ಸಮಾಜದ ಹಿರಿಯರಾದ ಕರಿಯಪ್ಪ ಮಡಿವಾಳ, ಈರಣ್ಣ, ಅಮರೇಶ, ವೀರೇಶ, ವೆಂಕಟೇಶ, ರಮೇಶ್, ಮಹದೇವಪ್ಪ ಹಡಪದ, ಪಟ್ಟಣ ಪಂಚಾಯತ ಸದಸ್ಯರಾದ ಮಲ್ಲಿಕಾರ್ಜುನ, ಮತ್ತು ಗಂಗಪ್ಪ ದಿನ್ನಿ, ಶಿವಪ್ಪ, ಯಮನಪ್ಪ ಹೊಸಮನಿ,ಉಮೇಶ, ಈ ಸಂದರ್ಭದಲ್ಲಿ ಇನ್ನು ಹಲವಾರು ಜನರು ಉಪಸ್ಥಿತರಿದ್ದರು.
ವರದಿ: ಶಿವಕುಮಾರ್ ಕವಿತಾಳ