46 total views
ಹರಿಹರ : ನಗರಸಭೆ ವ್ಯಾಪ್ತಿಗೆ ಒಳಪಟ್ಟ ವಿವಿಧ ಭಾಗಗಳಲ್ಲಿನ ಪುಟ್ ಪಾತ್ ವ್ಯಾಪಾರಿಗಳಿಂದ ದಿನವಹಿ ಸಂತೆ ಮತ್ತು ಪ್ರತಿ ಮಂಗಳವಾರ ನಡೆಯುವ ವಾರದ ಸಂತೆಯಲ್ಲಿ ನಗರಸಭೆ ವತಿಯಿಂದ ನಿಗದಿಪಡಿಸಿದ, ದರಗಳನ್ವಯ ಪ್ರಸಕ್ತ ಸಾಲಿನಲ್ಲಿ ಯಶಸ್ವಿ ಬಿಡ್ ದಾರರು ಗುತ್ತಿಗೆಯನ್ನು ಪಡೆದು ಅತಿ ಹೆಚ್ಚು ದರವನ್ನು ಸಣ್ಣ-ಪುಟ್ಟ ವ್ಯಾಪಾರಿಗಳಿಂದ ವಸೂಲಿ ಮಾಡುತ್ತಿರುವುದು ನಮ್ಮ ಜಯ ಕರ್ನಾಟಕ ಸಂಘಟನೆಯ ಗಮನಕ್ಕೆ ಸಾರ್ವಜನಿಕರು ತಿಳಿಸಿರುವ ಮೇರೆಗೆ ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ತಮ್ಮ ಆದೇಶದ ಅನ್ವಯ ಅಳತೆಗನುಗುಣವಾಗಿ ನಿಗದಿಪಡಿಸಿದ ದರಗಳನ್ನು ವಿವಿಧ ಪುಟ್ ಪಾತ್ ವ್ಯಾಪಾರಸ್ಥರಿಂದ ವಸೂಲಿ ಮಾಡಿ ಕ್ರಮ ವಹಿಸಲು ಹಾಗೂ ಪುಟ್ ಪಾತ್ ವ್ಯಾಪಾರಿಗಳಿಗೆ ವಾಹನ ಮಾಲೀಕರಿಗೆ ಹಣ್ಣುತರಕಾರಿ ವ್ಯಾಪಾರಸ್ಥರಿಗೆ ನಾಲ್ಕು ಚಕ್ರದ ದೂಡ್ವಾ ತಿಂಡಿ ಅಂಗಡಿ ಇತ್ಯಾದಿ ದಾರ ರಿಂದ ಹೆಚ್ಚುವರಿಯಾಗಿ ಪಡೆದಿರುವ ಹಣವನ್ನು ವಾಪಸು ಕೊಡಿಸಿ ಕೊಡಲು ಹಣ ಸ್ವೀಕರಿಸಿದ ಬಗ್ಗೆ ರಸೀದಿ ನೀಡಲು ಮತ್ತು ಸಾರ್ವಜನಿಕರಿಗೆ ತಮ್ಮ ಆದೇಶದಲ್ಲಿ ಹೊರಡಿಸಿದ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ನಿಗದಿಪಡಿಸಿದ ದರವನ್ನು ಬಹಿರಂಗವಾಗಿ ಧ್ವನಿವರ್ಧಕದ ಮೂಲಕ ಮತ್ತು ಕರಪತ್ರದ ಮೂಲಕ ತಿಳಿಸಿ ಅರಿವು ಮೂಡಿಸಲು ನಮ್ಮ ಜಯಕರ್ನಾಟಕ ಸಂಘಟನೆಯ ವತಿಯಿಂದ ವಿನಂತಿ ಸುತ್ತಾ ಸದರಿ ಗುತ್ತಿಗೆದಾರರು ಕಾನೂನುಬಹಿರವಾಗಿ ಹೆಚ್ಚುವರಿಯಾಗಿ ಅಣ ವಸೂಲಿ ಮಾಡಿರುವ ಕಾರಣ ಈ ಕೂಡಲೇ ಸದರಿ ಗುತ್ತಿಗೆದಾರರನ್ನು ರದ್ದುಪಡಿಸಲು ಆಗ್ರಹಿಸುತ್ತೇವೆ ಈ ಕುರಿತಂತೆ ಕೈಗೊಂಡ ಕ್ರಮದ ಬಗ್ಗೆ ಒಂದು ವಾರದೊಳಗಾಗಿ ನಮಗೆ ಮಾಹಿತಿ ನೀಡಲು ಕೋರುತ್ತೇವೆ ಎಂದು ಮನವಿ ಕೊಡಲಾಯಿತು.
ಈ ಸಂದರ್ಭದಲ್ಲಿ ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷರಾದ ಗೋವಿಂದ್ ಪ್ರಧಾನ ಕಾರ್ಯದರ್ಶಿಯಾದ ಸುನಿಲ್ ಸಿ ಚ್ ಸಂಘಟನಾ ಕಾರ್ಯದರ್ಶಿಗಳಾದ ಮಧು ನಗರ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಶ್ರೀನಿವಾಸ್ ಉಪಾಧ್ಯಕ್ಷರಾದ ಪ್ರವೀಣ್ ಪ್ರಧಾನ ಕಾರ್ಯದರ್ಶಿಯಾದ ರಜತ್ ಸಂಘಟನಾ ಕಾರ್ಯದರ್ಶಿಯಾದ ಪಾಂಡುರಂಗ ಖಜಾಂಚಿ ಕಾರ್ತಿಕ್ ಸಹಕಾರ್ಯದರ್ಶಿ ವೀರಭದ್ರ ಸ್ವಾಮಿ ಮತ್ತು ಮಾತ್ಮಗಾಂದಿ ಆಟೋ ನಿಲ್ದಾಣದ ಅಧ್ಯಕ್ಷರಾದ ಹರೀಶ್ ಬೆಳಕೇರಿ ಪವನ್ ರಾಘು ಕುಮಾರ್ ಮತ್ತು ಜಯಕರ್ನಾಟಕ ಆಪೆ ಆಟೋ ನಿಲ್ದಾಣದ ಅಧ್ಯಕ್ಷರಾದ ಕುಮಾರ್ ಹಾಲೇಶಪ್ಪ ಮತ್ತು ಸಂಘಟನೆಯ ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದರು.
ವರದಿ : ಭರ್ಮಪ್ಪ ಮಾಗಳದ