ಬಳ್ಳಾರಿ : ಜಿಲ್ಲಾ ಬಿಜೆಪಿ ಸಮಿತಿಯಿಂದ ನೂತನ ಪದಾಧಿಕಾರಿಗಳ ಸಭೆ ಬಳ್ಳಾರಿ ಜಿಲ್ಲಾ ಬಿಜೆಪಿ ಕಾರ್ಯಲಯದಲ್ಲಿ ನಡೆಯಿತು. ಈ ಸಭೆಯ ಉಧ್ಘಾಟನೆಯನ್ನು ರಾಜ್ಯ ಪ್ರಧಾನಕಾರ್ಯದರ್ಶಿಗಳಾದ ಅಶ್ವಥ್ ನಾರಯಾಣರವರು,ನೂತನ ಜಿಲ್ಲಾದ್ಯಕ್ಷರಾದ ಗೋನಾಳ್ ಮುರಹರ ಗೌಡ ,ಬಳ್ಳಾರಿ ನಗರ ಶಾಸಕರಾದ ಜಿ ಸೋಮಶೇಖರ ರೆಡ್ಡಿರವರು,ಸಿರಗುಪ್ಪ ಶಾಸಕರಾದ ಸೋಮಲಿಂಗಪ್ಪರವರು,ವಿಧಾನ ಪರಿಷತ್ ಸದಸ್ಯರಾದ ವೈ ಎಂ ಸತಿಶ್ ರವರು ನೇರವೆರಿಸಿದರು. ಅನಂತರ ನೂತನ ವಿಧಾನ ಪರಿಷತ್ ಸದಸ್ಯರಾದ ವೈ ಎಂ ಸತೀಶ್,ನೂತನ ಜಿಲ್ಲಾದ್ಯಕ್ಷ ಮುರಹರಗೌಡ, ಮಾಜಿ ಬಳ್ಳಾರಿ ಬಿಜೆಪಿ ಜಿಲ್ಲಾದ್ಯಕ್ಷರನ್ನು ಸನ್ಮಾನಿಸಿದರು.
ಈ ಸಭೆಯಲ್ಲಿ ಸಿದ್ದೆಶ್ ಯಾದವ್ .(ಬಳ್ಳಾರಿ ವಿಭಾಗ ಪ್ರಭಾರಿ),ಸಚ್ಚಿದಾನಂದ ಮೂರ್ತಿ(ಬಳ್ಳಾರಿ ಜಿಲ್ಲಾ ಪ್ರಭಾರಿ),ಪೂಜಪ್ಪ(ವಿಭಾಗಿಯ ಸಂಘಟನ ಪ್ರದಾನಕಾರ್ಯದರ್ಶಿ), ಗುರುಲಿಂಗನಗೌಡ(ರಾಜ್ಯ ಪ್ರಧಾನ ಕಾರ್ಯದರ್ಶಿ ರೈತ ಮೋರ್ಚ),ಕೆ ಎ ರಾಮಲಿಂಗಪ್ಪ(ಮಾಜಿ ಉಪಾದ್ಯಕ್ಷರು ಜಿಲ್ಲಾ ಪಂಚಾಯಿತಿ ಬಳ್ಳಾರಿ),ವಿರುಪಾಕ್ಷಗೌಡ(ಮಾಜಿ ಜಿಲ್ಲಾದ್ಯಕ್ಷರು,ಬಳ್ಳಾರಿ), ಅನಿಲ್ ಕುಮಾರ್ ಮೋಕ (ಜಿಲ್ಲಾ ಪ್ರದಾನ ಕಾರ್ಯದರ್ಶಿಗಳು,ಬಳ್ಳಾರಿ),ಕೆ ಎಸ್ ಅಶೋಕ್ ಕುಮಾರ್ (ಜಿಲ್ಲಾ ಪ್ರದಾನ ಕಾರ್ಯದರ್ಶಿ),ಶಿವ ಶಂಕರ ರೆಡ್ಡಿ(ಜಿಲ್ಲಾ ಪ್ರದಾನ ಕಾರ್ಯದರ್ಶಿ,ಬಳ್ಳಾರಿ),ಪಿ ಪಾಲಣ್ಣ ಬಳ್ಳಾರಿ ಬುಡ ಅದ್ಯಕ್ಷರು, ಜಿಲ್ಲಾ ಮಾದ್ಯಮ ಪ್ರಮುಖ ಕೃಷ್ಣಾ ರೆಡ್ಡಿ ಹಾಗೂ ಜಿಲ್ಲಾ ಮದ್ಯಮ ಸಹ ಪ್ರಮುಖ ರಾಜೀವ್ ತೊಗರಿ ಮತ್ತು ಜಿಲ್ಲಾ ಪದಾಧಿಕಾರಿಗಳು ಜಿಲ್ಲಾ ಮೋರ್ಚಾ ಅದ್ಯಕ್ಷರು ಮತ್ತು ಪ್ರದಾನ ಕಾರ್ಯದರ್ಶಿಗಳು ಮಂಡಲ ಅದ್ಯಕ್ಷರು ಮತ್ತು ಪ್ರದಾನ ಕಾರ್ಯದರ್ಶಿಗಳು ಮತ್ತು ವಾಕ್ತರರು ಉಪಸ್ತಿತಿ ಇದ್ದರು.