174 total views
ಕಾರಟಗಿ : ಮೂರ್ನಾಲ್ಕು ದಶಕಗಳಿಂದ ಕಾರಟಗಿಗೆ ಪದವಿ ಕಾಲೇಜ್ ಬೂದುಗುಂಪಾ ಗ್ರಾಮಕ್ಕೆ ಪಿಯು ಕಾಲೇಜ್ ಮರ್ಲಾನಹಳ್ಳಿ ಗ್ರಾಮಕ್ಕೆ ಪ್ರೌಢಶಾಲೆ ಮಂಜೂರಾತಿಗಾಗಿ ಜನಪ್ರತಿನಿಧಿಗಳ ಮತ್ತು ಶಿಕ್ಷಣ ಇಲಾಖೆಗಳ ಬಾಗಿಲಿಗೆ ತಿರುಗಿತಿರುಗಿ ಬೇಸತ್ತು ಸುಸ್ತಾದ ಶಿಕ್ಷಣ ಪ್ರೇಮಿಗಳಿಗೆ ಇಂದು ಮೇಲ್ದರ್ಜೆಗೇರಿದ ಕಾಲೇಜುಗಳನ್ನು ನೋಡಿದರೆ ಅನುಮಾನ ಮೂಡುತ್ತದೆ. ಕಾರಟಗಿ ಕೇಂದ್ರವಾದರೂ ಕೂಡ ಒಂದು ಪದವಿ ಕಾಲೇಜು ಇಲ್ಲ ಖಾಸಗಿ ಪದವಿ ಕಾಲೇಜು ಮೂರು ಇವೆ ಅಲ್ಲದೆ ವಿದ್ಯಾರ್ಥಿಗಳ ಸಂಖ್ಯಾನುಗುಣವಾಗಿ ಸರ್ಕಾರ ಪ್ರೌಢಶಾಲೆ ಪಿಯು ಕಾಲೇಜು ಮತ್ತು ಪದವಿ ಕಾಲೇಜುಗಳನ್ನು ಮುಂಜೂರಾತಿ ಮಾಡುವುದಾಗಿ ಆದೇಶ ಹೊರಡಿಸಿತ್ತು,ಆದರೆ ಅವು ಯಾವು ಈಗ ಜಾರಿಯಲ್ಲಿಲ್ಲ ಮತ್ತು ಹಲವು ದಶಕಗಳಿಂದ ಬೇಡಿಕೆ ಈಡೇರಿಕೆಗೆ ಹಲವು ಬಾರಿ ಜನಪ್ರತಿನಿಧಿಗಳಿಗೆ ಶಿಕ್ಷಣ ಇಲಾಖೆಗಳಿಗೆ ಮನವಿ ಪತ್ರ ಸಲ್ಲಿಸಿದರು ಕೂಡ ಕ್ಯಾರೆ ಎನ್ನದ ಸರ್ಕಾರ.
ಬೇಡಿಕೆ ಇರದ ಪ್ರೌಢಶಾಲೆಗಳಿಗೆ ಉನ್ನತೀಕರಿಸಿ ಕಾಲೇಜು ಮಂಜೂರು ಮಾಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಆದ್ದರಿಂದ ಬೂದಗುಂಪಾ ಪ್ರೌಢಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ಶಾಸಕರಿಗೆ ಮನವಿ ಸಲ್ಲಿಸುವ ಮೂಲಕ ಅಸಮಾಧಾನವನ್ನು ವ್ಯಕ್ತಪಡಿಸಿದರು ನಂತರ ಅವಶ್ಯವಿರುವ ಶಾಲೆಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ ಪ್ರೌಢಶಾಲೆ ಪಿಯು ಕಾಲೇಜ್ ಮತ್ತು ಪದವಿ ಕಾಲೇಜುಗಳನ್ನು ಶೀಘ್ರದಲ್ಲಿ ನೀಡದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು ನಂತರ ಮಾತನಾಡಿದ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೇಸುಗೂರು ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಲ್ಲಾ ಶಾಲಾ ಕಾಲೇಜುಗಳು ಮತ್ತು ವಿದ್ಯಾರ್ಥಿಗಳು ನನ್ನ ಕ್ಷೇತ್ರದ ವಿದ್ಯಾರ್ಥಿಗಳೇ ಆದ್ದರಿಂದ ಅವಶ್ಯವಿರುವ ಶಾಲಾ-ಕಾಲೇಜುಗಳನ್ನು ಮುಂಚೂರು ಮಾಡಿಸುವ ಕೆಲಸ ನನ್ನದು ಎಂದು ಭರವಸೆನೀಡಿದರು ಈಸಂದರ್ಭದಲ್ಲಿ ಬೂದಗುಂಪಾ ಗ್ರಾಮದ ಮತ್ತು ಸುತ್ತಮುತ್ತಲಿನ ಗ್ರಾಮದ ಹಳೆ ವಿದ್ಯಾರ್ಥಿಗಳ ಬಳಗ ಉಪಸ್ಥರಿದ್ದರು.